ಕಮಾಂಡೆಂಟ್ ಸಂತುದೇವಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ
Tuesday, March 11, 2025
ಲೋಕಬಂಧು ನ್ಯೂಸ್
ಉಡುಪಿ: ಆತಂಕವಾದಿಗಳಿಗೆ ಸಿಂಹ್ನಸ್ವಪ್ನವಾಗಿದ್ದ ಕಮಾಂಡೆಂಟ್ ಸಂತುದೇವಿ ಮಾರ್ಚ್ 10ರಂದು ಉಡುಪಿಗೆ ಆಗಮಿಸಿ, ಕೃಷ್ಣ ದರ್ಶನದ ಬಳಿಕ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭೇಟಿ ಮಾಡಿದರು.ಶ್ರೀಗಳು ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ, ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ನೀಡಿದರು.
ಹರಿಯಾಣದವರಾದ ಸಂತುದೇವಿ 1986ರಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ ಸೇರ್ಪಡೆಗೊಂಡಿದ್ದು ಲೇಡಿ ಸಿಂಗಮ್ ಎಂದು ಖ್ಯಾತಿ ಪಡೆದಿದ್ದರು. 39 ವರ್ಷಗಳ ಸೇವೆ ಸಲ್ಲಿಸಿದ್ದಾರೆ. 2005ರ ಜುಲೈ 5ರಂದು ಅಯೋಧ್ಯೆಯಲ್ಲಿ ನಡೆದ ಆತಂಕವಾದಿಗಳ ಆಕ್ರಮಣದ ಸಂದರ್ಭದಲ್ಲಿ 5 ಮಂದಿ ಆತಂಕವಾದಿಗಳನ್ನು ಹೊಡೆದುರುಳಿಸಿದ್ದರು. ಆ ಕಾರ್ಯಕ್ಕೆ ರಾಷ್ಟ್ರಪತಿಗಳಿಂದ ಪೊಲೀಸ್ ಪದಕ ಪಡೆದಿದ್ದರು.
ಕಾಶ್ಮೀರದ ಲಾವೇಪುರದಲ್ಲಿ 2020ರ ಫೆ.6ರಂದು ನಡೆದ ಆತಂಕವಾದಿ ಕಾರ್ಯಾಚರಣೆಯಲ್ಲಿ ಮೂವರು ಆತಂಕವಾದಿಗಳನ್ನು ಹತ್ಯೆಗೈದು ಒಬ್ಬನನ್ನು ಬಂಧಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದು ಅದಕ್ಕಾಗಿ ಅನೇಕ ಪ್ರಶಸ್ತಿ, ಗೌರವ ಪಡೆದಿದ್ದಾರೆ.
ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಗುಜರಾತ್, ಅಸ್ಸಾಂ, ಮಣಿಪುರ, ಮಧ್ಯಪ್ರದೇಶ ಮುಂತಾದೆಡೆ ಕಾರ್ಯನಿರ್ವಹಿಸಿ ಇದೀಗ ಭದ್ರಾವತಿಯಲ್ಲಿ ಆರ್.ಪಿ.ಎಫ್ 97 ಬೆಟಾಲಿಯನ್'ನಲ್ಲಿ ಕಮಾಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.