Mangalore: ಬಹುಕೋಟಿ ವಂಚಕ ಪೊಲೀಸ್ ಬಲೆಗೆ
Friday, July 18, 2025
ಲೋಕಬಂಧು ನ್ಯೂಸ್, ಮಂಗಳೂರು
ಕಡಿಮೆ ಬಡ್ಡಿಗೆ ಸಾಲ ನೀಡಿಕೆ, ಜಾಗ ವಿಕ್ರಯ ಮಾಡುವುದಾಗಿ ಹೇಳಿ ಶ್ರೀಮಂತ ಉದ್ಯಮಿಗಳಿಂದ ಹಣ ಪಡೆದು ಕೋಟಿಗಟ್ಟಲೆ ವಂಚಿಸುತ್ತಿದ್ದ ಬಹುಕೋಟಿ ವಂಚಕ ಜಪ್ಪಿನಮೊಗರು ನಿವಾಸಿ ರೋಹನ್ ಸಲ್ದಾನ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಗುರುವಾರ ತಡರಾತ್ರಿ ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಎಸಿಪಿ ರವೀಶ್ ನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
500 ಕೋಟಿ ಸಾಲದ ಆಮಿಷ
ಬಲೆಗೆ ಬಿದ್ದವರಿಂದ 50 ಲಕ್ಷದಿಂದ ನಾಲ್ಕು ಕೋಟಿ ರೂ. ವರೆಗೆ ಹಣ ಪಡೆದು ಮಾಡಿ ಆಮೇಲೆ ಯಾರಿಗೂ ಕಾಣದಂತೆ ನಿಗೂಢವಾಗಿ ತಪ್ಪಿಸಿಕೊಳ್ಳುತ್ತಿದ್ದ. ಆತನ ಮನೆಯನ್ನೇ ಅಡಗುತಾಣವಾಗಿಸಿದ್ದ.
ಲಕ್ಷಾಂತರ ಬೆಲೆಬಾಳುವ ವಿವಿಧ ಜಾತಿಯ ಗಿಡಗಳು, ಶಾಂಪೇನ್'ಗಳು, ಕುಡಿತದ ಮಾದಕ ಪೇಯಗಳ ದಾಸ್ತಾನುಗಳಿದ್ದವು. ಮಲೇಷ್ಯಾದ ಯುವತಿಯನ್ನು ಇಟ್ಟುಕೊಂಡು ಮಜಾ ಉಡಾಯಿಸುತ್ತಿದ್ದ.
ಆತನ 3 ತಿಂಗಳ ವ್ಯವಹಾರ ಒಂದು ಖಾತೆಯಲ್ಲಿ 40 ಕೋಟಿ ಇರುವುದು ಬೆಳಕಿಗೆ ಬಂದಿದೆ.