New Delhi: ನಿಮಿಷಪ್ರಿಯಾ ಮರಣ ದಂಡನೆ ಮುಂದೂಡಿಕೆ
Saturday, August 2, 2025
ಲೋಕಬಂಧು ನ್ಯೂಸ್, ನವದೆಹಲಿ
ಕೇರಳ ನರ್ಸ್ ನಿಮಿಷಪ್ರಿಯಾ ಮರಣ ದಂಡನೆಯನ್ನು ಯೆಮನ್ ಸರ್ಕಾರ ಮುಂದೂಡಿದೆ ಎಂದು ಭಾರತ ಶುಕ್ರವಾರ ದೃಢಪಡಿಸಿದೆ.ಆದರೆ, ಅವರ ಮರಣ ದಂಡನೆಯನ್ನು ರದ್ದುಗೊಳಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದೆ.
ಪ್ರಕರಣ ಸಂಬಂಧ ಪರಿಶೀಲಿಸದ ವರದಿ ಮತ್ತು ತಪ್ಪು ಮಾಹಿತಿ ವಿರುದ್ಧ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಸರ್ಕಾರ, ನಿಮಿಷಾ ಮತ್ತು ಅವರ ಕುಟುಂಬದೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ. ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲಸ ಮಾಡುವುದರ ಜೊತೆಗೆ ಅಗತ್ಯವಿರುವ ಎಲ್ಲಾ ಸಹಾಯ ಒದಗಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಜೈಸ್ವಾಲ್ ಹೇಳಿದರು