
Udupi: ಬದುಕಿನಿಂದ ಸಂಪತ್ತು ಬೇರೆಯಾಗಿರಬೇಕು
Saturday, September 13, 2025
ಲೋಕಬಂಧು ನ್ಯೂಸ್, ಉಡುಪಿ
ಜೀವನ ನೌಕೆ ಸಾಗಲು ಸಂಪತ್ತು ಬೇಕು. ನೌಕೆಯಿಂದ ಹೊರಗಡೆ ನೀರಿದ್ದರೆ ನೌಕೆ ಸುಲಭವಾಗಿ ಸಾಗುವಂತೆ ಬದುಕಿನಿಂದ ಸಂಪತ್ತು ದೂರವಿದ್ದಾಗ ಸುಗಮ ಬದುಕು ಸಾಧ್ಯ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಂಡಿಕೇಟ್ ಬ್ಯಾಂಕ್ ಸಮಸ್ತ ನೌಕರರ ಆಶ್ರಯದಲ್ಲಿ ಶನಿವಾರ ನಡೆದ ಸಿಂಡಿಕೇಟ್ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ನಮ್ಮ ಬದುಕಿನಿಂದ ಸಂಪತ್ತು ದೂರವಾಗಿರಬೇಕಾದರೆ ಅದನ್ನು ಬ್ಯಾಂಕಿನಲ್ಲಿಡಬೇಕು. ಬ್ಯಾಂಕಿನಲ್ಲಿಟ್ಟ ಸಂಪತ್ತು ಸುರಕ್ಷಿತವಾಗಿರುವ ಜೊತೆಗೆ ಬ್ಯಾಂಕು ಕೂಡಾ ಅಭಿವೃದ್ಧಿ ಹೊಂದುತ್ತದೆ. ಬ್ಯಾಂಕಿನ ಅಭಿವೃದ್ಧಿಯಲ್ಲಿ ನೌಕರ ವೃಂದದ ಕೊಡುಗೆ ಮಹತ್ತರ ಎಂದರು.
ಸಿಂಡಿಕೇಟ್ ಬ್ಯಾಂಕ್ ಸ್ಥಾಪಕರಾದ ಪೈ ಬಂಧುಗಳಿಗೂ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೂ ಅವಿನಭಾವ ಸಂಬಂಧ ಇತ್ತು. ಹಾಗೂ ಬ್ಯಾಂಕು ಹಾಗೂ ಪೇಜಾವರ ಮಠಕ್ಕೆ ಉತ್ತಮ ಬಾಂಧವ್ಯ ಇತ್ತು ಎಂದು ಸ್ಮರಿಸಿದರು.
ಮಣಿಪಾಲ ಮಾಹೆ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ,ಮೋಹನ ಆಳ್ವ ಅಭ್ಯಾಗತರಾಗಿದ್ದರು.
ಸಿಂಡಿಕೇಟ್ ಸ್ಥಾಪಕ ಪೈ ಕುಟುಂಬ ಸದಸ್ಯರಾದ ಟಿ.ವಸಂತಿ ಆರ್. ಪೈ, ಕುಸುಮಾ ಪಿ.ಪೈ, ಸತೀಶ ಯು. ಪೈ, ಸಂಧ್ಯಾ ಪೈ, ಟಿ.ನಾರಾಯಣ ಪೈ, ವಿಜಯಲಕ್ಷ್ಮಿ ಎನ್.ಪೈ, ಟಿ.ಅಶೋಕ್ ಪೈ, ಗಾಯತ್ರಿ ಪೈ, ಹರೀಶ್ ಪೈ, ಟಿ.ಸಚಿನ್ ಪೈ, ಪ್ರೇಮನಾಥ ಕುಡ್ವ, ಸುಶೀಲ ಕುಡ್ವ ಮತ್ತು ಅನಂತ ಶೆಣೈ ಅವರನ್ನು ಸನ್ಮಾನಿಸಲಾಯಿತು.
ಕೆನರಾ ಬ್ಯಾಂಕಿನ ರಾಮ ನಾಯಕ್, ಯುಎಇ ಕನ್ನಡಿಗರು ಮತ್ತು ತುಳುವ ಒಕ್ಕೂಟದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ರಿಸರ್ವ್ ಬ್ಯಾಂಕಿನ ಮಾಜಿ ಡಿಪ್ಯೂಟಿ ಗವರ್ನರ್ ವಿಠಲದಾಸ್ ಲೀಲಾಧರ್ ಅಭ್ಯಾಗತರಾಗಿದ್ದರು.
ಕಾರ್ಯಕ್ರಮ ಸಮಿತಿ ಅಧ್ಯಕ್ಷ ಕೆ.ಟಿ. ರೈ ಸ್ವಾಗತಿಸಿದರು. ಪದಾಧಿಕಾರಿಗಳಾದ ಸುಜೀರ್ ಪ್ರಭಾಕರ್, ದಿನಕರ್ ಎಸ್. ಪೂಂಜ, ಪ್ರಕಾಶ್ ಕರೋಟ್ಯ, ಸಂಜಯ್ ಮಾಂಜ್ರೇಕರ್, ಜನಾರ್ದನ ಭಟ್, ರಾಮಚಂದ್ರ ಉಪಾಧ್ಯಾಯ ಮೊದಲಾದವರಿದ್ದರು.
ಎ.ಎಸ್. ಚಂದ್ರಶೇಖರ್ ಮತ್ತು ಅನ್ನಾ ಮರಿಯಾ ಮೊರಾಸ್ ನಿರೂಪಿಸಿದರು.
ಬಳಿಕ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.