ಕೊಡವೂರು ಮಹಾರುದ್ರ ಯಾಗಕ್ಕೆ ಚಾಲನೆ: ತೋರಣ ಮುಹೂರ್ತ, ರುದ್ರಪಠಣ ಆರಂಭ

ಲೋಕಬಂಧು ನ್ಯೂಸ್ | ಉಡುಪಿ, ಮೇ 15
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಮೇ 14ರಿಂದ ಮೇ 19ರ ವರೆಗೆ ನಡೆಯುವ ಮಹಾರುದ್ರ ಯಾಗದ ಅಂಗವಾಗಿ ವೇ.ಮೂ.ಪುತ್ತೂರು ಹಯವದನ ತಂತ್ರಿ ಮತ್ತು ವೇ.ಮೂ.ವಾದಿರಾಜ ತಂತ್ರಿ ನೇತೃತ್ವದಲ್ಲಿ ಮಧುಸೂದನ ತಂತ್ರಿ, ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಸಹಕಾರದೊಂದಿಗೆ ಶುಕ್ರವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಋತ್ವಿಜರ ಸ್ವಾಗತ, ಪ್ರಾರ್ಥನೆ, ತೋರಣ ಮುಹೂರ್ತ ನಡೆದು ಬಳಿಕ ಅರಣಿ ಮಥನ, ಆಗ್ನಿ ಜನನ, ಬ್ರಹ್ಮಕೂರ್ಚ ಹೋಮ, ಕಂಕಣಬಂಧ, ದ್ವಾದಶ ನಾರಿಕೇಳ ಗಣಯಾಗ, ರುದ್ರಜಪ ಆರಂಭಗೊಂಡಿತು.
ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ಸುಮಾರು 7 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.


ಸುಮಾರು 1,200 ಮಹಿಳೆಯರು ಮಹಾರುದ್ರ ಯಾಗದ ಸಂಕಲ್ಪ ನಡೆಸಿದರು.


ಈ ಸಂದರ್ಭದಲ್ಲಿ ರಮ್ಲಾ ಬೆಳ್ತಂಗಡಿ ತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.


ಸಂಜೆ ವಾಸ್ತುಹೋಮ, ವಾಸ್ತುಪೂಜೆ ರಾಕ್ಷೆಓಘ್ನ ಹೋಮ ನಡೆಯಿತು.


ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ 8ರಿಂದ ತೊಟ್ಟಂ ಶಬರಿ ಮತ್ತು ತಂಡ ಹಾಗೂ ತೆಂಕನಿಡಿಯೂರು ಸಾಯಿ ನಾಟ್ಯಾಲಯದವರಿಂದ ನೃತ್ಯ ಕಾರ್ಯಕ್ರಮ, ಲಕ್ಷ್ಮೀ ಗುರುರಾಜ್ ಅವರಿಂದ ನೃತ್ಯಸಿಂಚನ ಕಾರ್ಯಕ್ರಮ ಜರಗಿತು.


ಮಹಾರುದ್ರಯಾಗ ಸಮಿತಿ ಅಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ಪ್ರಧಾನ ಸಂಚಾಲಕರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಮತ್ತು ತಾರನಾಥ ಪೂಜಾರಿ, ಶಂಕರನಾರಾಯಣ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ವ್ಯವಸ್ಥಾಪನ ಸಮಿತಿ ಸದಸ್ಯರಾದ ವಾದಿರಾಜ್ ಸಾಲ್ಯಾನ್, ರಾಜ ಎ. ಸೇರಿಗಾರ, ಭಾಸ್ಕರ ಪಾಲನ್ ಬಾಚನಬೈಲು, ಕೆ. ಬಾಬ, ಯಶೋದರ ಸಾಲ್ಯಾನ್, ಉಷಾ ಆನಂದ್ ಮತ್ತು ಶೀಲಾ ದೇವಾಡಿಗ, ಪ್ರಮುಖರಾದ ಹರಿಯಪ್ಪ ಕೋಟ್ಯಾನ್, ಸತೀಶ್ ಕುಂದರ್, ಧನಂಜಯ ಕಾಂಚನ್, ರಮೇಶ್ ತಿಂಗಳಾಯ, ನಂದಕಿಶೋರ್ ಕೆಮ್ಮಣ್ಣು, ಎಂ.ಎಸ್. ಭಟ್, ಪ್ರವೀಣ್ ಜಿ. ಕೊಡವೂರು, ಬಾಲಕೃಷ್ಣ ಕೊಡವೂರು, ರಾಮಪ್ಪ ಸಾಲ್ಯಾನ್, ಯಾದವ ಅಮೀನ್, ಜನಾರ್ದನ ಕೊಡವೂರು, ಪೂರ್ಣಿಮಾ ಜನಾರ್ದನ, ದಯಾಕರ ವಿ. ಸುವರ್ಣ, ಸುಕನ್ಯ ಪೂಜಾರಿ, ಗೀತಾ ವಾಗ್ಳೆ ಮೊದಲಾದವರು ಪಾಲ್ಗೊಂಡಿದ್ದರು.