Deepavali: ಕೃಷ್ಣಮಠದಲ್ಲಿ ದೀಪಾವಳಿ ಆಚರಣೆ
Sunday, November 12, 2023
ಉಡುಪಿ, ನ.12 (ಲೋಕಬಂಧು ವಾರ್ತೆ): ಶ್ರೀಕೃಷ್ಣ ಮಠದ ಕನಕ ಗೋಪುರದ ಮುಂಭಾಗದಲ್ಲಿ ಭಾನುವಾರ ಸಂಜೆ ಬಲೀಂದ್ರ ಪೂಜೆ, ಲಕ್ಷ್ಮೀಪೂಜೆ ಹಾಗೂ ವ್ಯೋಮದೀಪ ಆಚರಿಸಲಾಯಿತು.
ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಹಾಗೂ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ಪರ್ಯಾಯ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿತು.