-->
ಫೆ.22, 23: ಆಹಾರ ಆರೋಗ್ಯ ಹಣಕಾಸು ಉತ್ಸವ

ಫೆ.22, 23: ಆಹಾರ ಆರೋಗ್ಯ ಹಣಕಾಸು ಉತ್ಸವ

ಲೋಕಬಂಧು ನ್ಯೂಸ್
ಉಡುಪಿ, ಫೆ.21: ಸಮತ್ವ ಮತ್ತು ಸದ್ಗುರು ಸೌಹಾರ್ದ ಸಹಕಾರಿ, ನಮ್ಮವರ ಬಜಾರ್, ವಿಪ್ರ ಬಿಸಿನೆಸ್ ಫೋರಮ್, ಮತ್ತು ಬ್ರಾಂಡ್ಮಾಂಡೆಕ್ ಉಡುಪಿ ಸಂಯುಕ್ತ ಆಶ್ರಯದಲ್ಲಿ ಫೆ. 22 ಮತ್ತು 23ರಂದು ಎಂಜಿಎಂ ಕಾಲೇಜು ಆವರಣದಲ್ಲಿ ಆಹಾರ, ಆರೋಗ್ಯ ಮತ್ತು ಹಣಕಾಸು ಉತ್ಸವ ನಡೆಯಲಿದೆ.
ಕಾರ್ಯಕ್ರಮವನ್ನು ಫೆ.22ರ ಬೆಳಿಗ್ಗೆ 10 ಗಂಟೆಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಮಾಜಿ ಸಚಿವ ಹಾಗೂ ಕದಂಬ ಸಂಸ್ಥೆ ಸಂಸ್ಥಾಪಕ ಡಾ.ಅನಂತಕುಮಾರ ಹೆಗಡೆ ಉದ್ಘಾಟಿಸುವರು. ಕರ್ಣಾಟಕ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಗೋಪಾಲಕೃಷ್ಣ ಸಾಮಗ ಮತ್ತು ಬೆಂಗಳೂರು ಇಂಡಿಯಾ ಸ್ವೀಟ್ ಹೌಸ್ ಸಂಸ್ಥಾಪಕ ವಿಶ್ವನಾಥ್ ಅಭ್ಯಾಗತರಾಗಿ ಭಾಗವಹಿಸುವರು.
ಈ ಸಂದರ್ಭದಲ್ಲಿ ಸದ್ಗುರು ಸಂಸ್ಥೆಯ ಮೊಬೈಲ್ ಆ್ಯಪ್ ಮತ್ತು ಹಲೋ ಉಡುಪಿ ಸ್ಮರಣ ಸಂಚಿಕೆ ಅನಾವರಣಗೊಳಿಸಲಾಗುವುದು.


ಎರಡು ದಿನಗಳ ಉತ್ಸವದಲ್ಲಿ ಆಹಾರ, ಆರೋಗ್ಯ ಮತ್ತು ಜೀವನ ಶೈಲಿ ಹಾಗೂ ಸುಸ್ಥಿರ ಹಣಕಾಸು ನಿರ್ವಹಣೆ ಕುರಿತು ಗೋಷ್ಠಿ ಮತ್ತು ಚರ್ಚೆಗಳು ನಡೆಯಲಿವೆ. ಅಲ್ಲದೆ, ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಸ್ಪರ್ಧೆ, `ನಾನು ಮತ್ತು ನನ್ನ ಕಂದಮ್ಮ' ಫೋಟೋ ಸ್ಪರ್ಧೆ ಮತ್ತು `ಮೈ ಬಿಗ್ ಫ್ಯಾಮಿಲಿ ಸೆಲ್ಫಿ' ಸ್ಪರ್ಧೆ ಆಯೋಜಿಸಲಾಗಿದೆ.


ಆಹಾರ, ಆರೋಗ್ಯ, ಹಣಕಾಸು ಮತ್ತು ಜೀವನಶೈಲಿ ಕುರಿತು 60ಕ್ಕೂ ಹೆಚ್ಚು ಉದ್ಯಮಗಳು ಭಾಗವಹಿಸುವ ದೊಡ್ಡ ಪ್ರದರ್ಸಿಕೆ ಇರಲಿದೆ. ಇದು ಸಹಜ ಜೀವನ ಶೈಲಿ ಮತ್ತು ಆರ್ಥಿಕ ಸಮೃದ್ಧಿ ಬಗ್ಗೆ ಅರಿವು ಮೂಡಿಸಲು ಸಹಾಯವಾಗಿದೆ.


ಉತ್ಸವದಲ್ಲಿ ಶನಿವಾರ ಪ್ರೊ.ಪ್ರಹ್ಲಾದ ಆಚಾರ್ಯ ಮತ್ತು ತಂಡದಿಂದ ಶನಿವಾರ ಹಾಗೂ ಜ್ಯೂನಿಯರ್ ಶಂಕರ್ ಅವರಿಂದ ಭಾನುವಾರ ಸಂಜೆ ಜಾದೂ ಪ್ರದರ್ಶನ ಹಾಗೂ ಭಾನುವಾರ ಮಕ್ಕಳಿಂದ ವಿಶೇಷ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ.


ಪ್ರವೇಶ ಉಚಿತವಾಗಿದ್ದು, ಈ ಬೃಹತ್ ಹಾಗೂ ಮಾಹಿತಿ ಸಮೃದ್ಧ ಮೇಳದಲ್ಲಿ ಹಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಉದ್ಯಮಿಗಳು ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

Ads on article

Advertise in articles 1

advertising articles 2

Advertise under the article