ಪರಿಷತ್ ಚುನಾವಣೆ: ಕಾಂಗ್ರೆಸ್‌ನ ಐವರು, ಬಿಜೆಪಿಯ ಈರ್ವರಿಗೆ ಗೆಲುವು

ಲೋಕಬಂಧು ನ್ಯೂಸ್ | ಬೆಂಗಳೂರು, ಜೂ.18
ವಿಧಾನ ಪರಿಷತ್​​ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್‌ನ ಐವರು ಮತ್ತು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.ಯಾರಿಗೆ ಎಷ್ಟು ಮತ?
ಕಾಂಗ್ರೆಸ್ ಅಭ್ಯರ್ಥಿಗಳಾದ ವಿನಯ್ ಕಾರ್ತಿಕ್​ 32, ಬಿ.ಕೆ. ಹರಿಪ್ರಸಾದ್​​ 30, ತಿಪ್ಪಣ್ಣಪ್ಪ ಕಮಕನೂರು 30, ಬಿ.ಎಸ್. ಶಿವಣ್ಣ 30 ಮತ್ತು ಪಿ.ವಿ. ಮೋಹನ್ 29 ಮತಗಳನ್ನು ಪಡೆದಿದ್ದಾರೆ.


ಬಿಜೆಪಿ ಅಭ್ಯರ್ಥಿಗಳಾದ ಆರ್. ರಘು 29 ಮತಗಳನ್ನು ಪಡೆದಿದ್ದರೆ, ಇನ್ನೋರ್ವ ಅಭ್ಯರ್ಥಿ ಲಿಂಗರಾಜ್ ಪಾಟೀಲ್​‌ 27 ಮತ ಪಡೆದಿದ್ದಾರೆ.


ಪರಾಜಿತ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರಿಗೆ 14 ಮತ ಲಭಿಸಿದೆ.


ಲಿಂಗರಾಜ್ ಪಾಟೀಲ್​ಗೆ ಗೆಲುವು
ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್​ಗೆ 11 ಹೆಚ್ಚುವರಿ ಮತಗಳು ದೊರೆತಿವೆ. ಹಾಗಾಗಿ ಲಿಂಗರಾಜ್ ಪಾಟೀಲ್‌ ಅವರು ಗೆಲುವಿನ ಬೇಕಾದ ಮತಗಳನ್ನು ಪಡೆದಿರಲಿಲ್ಲ. ಅಭ್ಯರ್ಥಿ ಗೆಲುವಿಗೆ 27.63 ಮತ ಅವಶ್ಯವಿದ್ದು, ಲಿಂಗರಾಜ್ ಪಾಟೀಲ್​‌ ಕೇವಲ 27 ಮತ ಪಡೆದಿದ್ದರು. ಜೆಡಿಎಸ್​ನ ಗೋವಿಂದರಾಜು 14 ಮತ ಪಡೆದಿದ್ದ ಹಿನ್ನೆಲೆಯಲ್ಲಿ ಎಲಿಮಿನೇಷನ್ ರೌಂಡ್'ನಲ್ಲಿ ಲಿಂಗರಾಜ್ ಪಾಟೀಲ್​ಗೆ ಜಯ ಸಿಕ್ಕಿದೆ.


ಒಂದು ಮತ ಅಸಿಂಧು!
ಚಲಾವಣೆಗೊಂಡಿದ್ದ 222 ಮತಗಳ ಪೈಕಿ ಒಂದು ಮತವನ್ನು ಸಂಖ್ಯೆ ಸರಿಯಾಗಿ ಬರೆಯದಿರುವ ಕಾರಣದಿಂದ ಅಸಿಂಧುಗೊಳಿಸಲಾಗಿದೆ.