ಕಾಪು ಹೊಸಮಾರಿಗುಡಿ ದಿವ್ಯಸನ್ನಿಧಿಯಲ್ಲಿ 'ಮಾತೃವೈಭವ'ಕ್ಕೆ ಚಾಲನೆ

ಕಾಪು: ಇಲ್ಲಿನ ಶ್ರೀ ಹೊಸಮಾರಿಗುಡಿ ದಿವ್ಯಸನ್ನಿಧಿಯಲ್ಲಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ಪುನಃಪ್ರತಿಷ್ಠಾ ಪ್ರಥಮ ವರ್ಧಂತಿ ಮಹೋತ್ಸವ ಅಂಗವಾಗಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ 'ಮಾತೃ ವೈಭವ' ಭಕ್ತಿಭಾವದ ಕಲರವ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶನಿವಾರ ಚಾಲನೆ ನೀಡಲಾಯಿತು.ಶ್ರೀ ಹೊಸಮಾರಿಗುಡಿ ದಿವ್ಯಸನ್ನಿಧಿಯ ಪ್ರಧಾನ ತಂತ್ರಿ ಕೊರಂಗ್ರಪಾಡಿ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ ಸಹಯೋಗದೊಂದಿಗೆ ದೇವಳದ ಅಭಿವೃದ್ಧಿ ಸಮಿತಿ ಮತ್ತು ಮಾತೃ ವೈಭವ ಸೇವಾ ಸಮಿತಿ ಅಧ್ಯಕ್ಷ ರಾಜರ್ಷಿ ಕೆ.ವಾಸುದೇವ ಶೆಟ್ಟಿ ಮತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಮುಂದಾಳತ್ವದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಅದಕ್ಕೂ ಮುನ್ನ ಕುಮಾರಗುರು  ತಂತ್ರಿ ಶ್ರೀ ಮಾರಿಯಮ್ಮ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.


ಮಾತೃ ವೈಭವದ ಬಗ್ಗೆ ಮಾಹಿತಿ ನೀಡಿದ ಅವರು ಮಾತೃಪ್ರೇಮ ಅತೀ ಮುಖ್ಯವಾದುದು. ನಾವು ವಾಸಿಸುವ ನೆಲ ಭಾರತ ಮಾತೆ. ನಮಗೆ ಉಸಿರು ಕೊಟ್ಟ ಪ್ರಕೃತಿ ಮಾತೆ. ಕುಡಿಯುವ ನೀರು ಗಂಗಾ ಮಾತೆ. ಜ್ಞಾನ ಕೊಟ್ಟು ವೇದಮಾತೆ. ವ್ಯಕ್ತಿಗೆ ಜನ್ಮ ನೀಡುವುದು ತಾಯಿಯಿಂದ ಮಾತ್ರ ಸಾಧ್ಯ ಹಾಗಾಗಿ ಅದೆಲ್ಲದರಲ್ಲೂ ಮಾತೃತ್ವ ಎದ್ದುಕಾಣುತ್ತದೆ. ಹಾಗಾಗಿ ಶ್ರೀ ಮಾರಿಯಮ್ಮನ ಸನ್ನಿಧಾನದಲ್ಲಿ ಮಾತೆಯರಿಂದ ಮಾರಿಯಮ್ಮನ ಪ್ರೇರಣೆಯಿಂದ ಮಾತೃ ವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಮಾತೃ ವೈಭವದ ಕಾರ್ಯಕ್ರಮದಲ್ಲಿ
ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಮಂಜುಳಾ ಟಿ. ಎನ್., ಶ್ರುತಿ ಹರಿರಾಮ್ ಶಂಕರ್, ಬೀನಾ ವಾಸುದೇವ ಶೆಟ್ಟಿ, ರಂಜನಿ ಸುಧಾಕರ ಹೆಗ್ಡೆ ತುಂಗಾ, ಅನುರಾಧ ಮನೋಹರ್ ಶೆಟ್ಟಿ, ಮಮತಾ ಯೋಗೀಶ್ ಶೆಟ್ಟಿ, ವಿದ್ಯಾ ರವಿಕಿರಣ್, ಲಕ್ಷ್ಮೀ ಶ್ರೀನಿವಾಸ ತಂತ್ರಿ, ಸುಗುಣಾ ರತ್ನಾಕರ್ ಶೆಟ್ಟಿ ನಡಿಕೆರೆ ಸೇರಿದಂತೆ 81 ಮಂದಿ ಮಹಿಳೆಯರು ಮಾತೃ ವೈಭವ ದೀಪ ಪ್ರಜ್ವಲನೆಗೈದರು.ಬಳಿಕ ಅರಣಿಮಥನ, ಗಣಯಾಗ, ನವಗ್ರಹ ಹೋಮ, ಮೃತ್ಯುಪಂಚಕ ಪೂಜೆ, ಶ್ರೀ ಚಂಡೀಪುರಶ್ಚರಣ ಹಾಗೂ ಸಂಜೆ ವಾಸ್ತುಹೋಮ, ವಾಸ್ತುಪೂಜೆ ಮತ್ತು ಸುದರ್ಶನ ರಕ್ಷಾ ಪ್ರಕ್ರಿಯೆ ನಡೆಯಿತು.


ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಶಾಸಕ ಸುರೇಶ್ ಬಾಬು ಚಿಕ್ಕನಾಯಕಹಳ್ಳಿ, ಭಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಶ್ರೀ ಹೊಸಮಾರಿಗುಡಿ ದಿವ್ಯಸನ್ನಿಧಿಯ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು, ಮನೋಹರ ಎಸ್. ಶೆಟ್ಟಿ, ಗಂಗಾಧರ ಸುವರ್ಣ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಮುಂಬಯಿ ಸಮಿತಿ ಗೌರವಾಧ್ಯಕ್ಷ ಸುಧಾಕರ ಹೆಗ್ಡೆ ತುಂಗಾ ಗ್ರೂಪ್ಸ್, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ, ಮಾತೃ ವೈಭವ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಬಾಲಾಜಿ, ಕಾರ್ಯಾಧ್ಯಕ್ಷ ಭಗವಾನ್ ದಾಸ್ ಶೆಟ್ಟಿಗಾರ್, ಪ್ರಭಾಕರ ಎಸ್. ಪೂಜಾರಿ, ಹರಿಯಪ್ಪ ಕೋಟ್ಯಾನ್, ಲಕ್ಷ್ಮೀಶ ತಂತ್ರಿ ಕಲ್ಯ, ಕಾರ್ಯದರ್ಶಿ ಜಯರಾಮ ಆಚಾರ್ಯ,ಮೊಕ್ತೇಸರರಾದ ಶೇಖರ್ ಸಾಲ್ಯಾನ್, ಮನೋಹರ ರಾವ್, ರವೀಂದ್ರ ಮಲ್ಲಾರು, ಜಯಲಕ್ಷ್ಮೀ ಎಸ್. ಶೆಟ್ಟಿ, ಚರಿತ ದೇವಾಡಿಗ, ಮುಂಬಯಿ ಸಮಿತಿಯ ಸಂದೀಪ್ ಶೆಟ್ಟಿ ಮುಂಬಯಿ, ರಮೇಶ್ ಶೆಟ್ಟಿ, ಪಾಂಡು ಶೆಟ್ಟಿ, ವಸಂತ ಶೆಟ್ಟಿ, ಪ್ರೇಮನಾಥ ಶೆಟ್ಟಿ, ಆರ್. ಜಿ. ಶೆಟ್ಟಿ, ಅಶ್ವಿನ್ ಶೆಟ್ಟಿ, ಸ್ಥಳೀಯ ಸಮಿತಿ ಪ್ರಮುಖರಾದ ಶ್ರೀಕರ ಶೆಟ್ಟಿ ಕಲ್ಯ, ವಿಕ್ರಂ ಕಾಪು, ನಿರ್ಮಲ್ ಕುಮಾರ್ ಹೆಗ್ಡೆ, ಶಿಲ್ಪ ಜಿ. ಸುವರ್ಣ, ಗೀತಾಂಜಲಿ ಎಂ. ಸುವರ್ಣ, ಸಾವಿತ್ರಿ ಗಣೇಶ್, ಸುರೇಶ್ ಶೆಟ್ಟಿ ಅಯೋಧ್ಯ, ರಮೇಶ್ ಶೆಟ್ಟಿ ಕೊಲ್ಯ, ಡಾ.ಪ್ರಶಾಂತ್ ಶೆಟ್ಟಿ, ಸುಧಾಕರ ಶೆಟ್ಟಿ ಮಕರ, ಕೆ. ವಿಶ್ವನಾಥ್, ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು, ರಘುರಾಮ್ ಶೆಟ್ಟಿ, ಸುನಿಲ್ ಪೂಜಾರಿ, ರಮೇಶ್ ಕಲ್ಮಾಡಿ, ರೇಣುಕಾ ಜೋಗಿ ಮೊದಲಾದವರಿದ್ದರು.