ರಾಮಮಂದಿರ ದೇಣಿಗೆ ಲೂಟಿಕೋರರಿಗೆ ಕಠಿಣ ಶಿಕ್ಷೆಯಾಗಲಿ

ಲೋಕಬಂಧು ನ್ಯೂಸ್ | ಅಯೋಧ್ಯೆ, ಜೂ.26
ಮರ್ಯಾದಾಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಯ ಶ್ರೀರಾಮ ಮಂದಿರ ದೇಣಿಗೆಯ ಲೂಟಿಕೋರರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ದೇವಳದ ಅರ್ಚಕರು ಹಾಗೂ ಸ್ಥಳೀಯರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಗ್ರಹಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಎಫ್‌ಐಆರ್ ದಾಖಲಿಸಿ, ಎಂಟು ಮಂದಿ ಆರೋಪಿಗಳನ್ನು ಬಂಧಿಸಿದೆ. ಲಕ್ಷಾಂತರ ಜನರ ನಂಬಿಕೆಗೆ ದ್ರೋಹ ಬಗೆದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸ್ಥಳೀಯರು ಒಕ್ಕೊರಳಿನಿಂದ ಒತ್ತಾಯಿಸಿದರು.


ವಿಶೇಷ ತನಿಖಾ ತಂಡದ ತನಿಖಾ ಕಾನೂನು ಪ್ರಗತಿ ಸಮ್ಮತವಾಗಿದ್ದರೂ ಇನ್ನೂ ಹೆಚ್ಚು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ತ್ವರಿತ, ಪಾರದರ್ಶಕ ಹಾಗೂ ಮಾದರಿ ತೀರ್ಮಾನ ಕೈಗೊಳ್ಳುವಂತೆ ಆಗ್ರಹಿಸಿದರು.


ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಅಯೋಧ್ಯೆಯಿಂದ ಹೊರಗಟ್ಟಬೇಕು ಎಂದು ವಾಗ್ಮಿ ಕರ್ಪಾತ್ರಿ ಮಹಾರಾಜ್, ಸಾಕೇತ್ ಭವನ ಪೀಠಾಧೀಶ್ವರ ಸೀತಾರಾಮ್ ದಾಸ್'ಜಿ ಮಹಾರಾಜ್ ಮೊದಲಾದವರು ಆಗ್ರಹಿಸಿದ್ದಾರೆ.