ಎಸ್.ಜಾನಕಿ ನಿಧನಕ್ಕೆ ಪೇಜಾವರ ಶ್ರೀ ಸಂತಾಪ

ಲೋಕಬಂಧು ನ್ಯೂಸ್ | ಉಡುಪಿ, ಜು.11
ಹಿರಿಯ ಗಾಯಕಿ ಎಸ್.ಜಾನಕಿ ನಿಧನಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂತಾಪ ಸೂಚಿಸಿದ್ದಾರೆ.
ಅವರು ತಮ್ಮ ಶೋಕ ಸಂದೇಶದಲ್ಲಿ 'ತಮ್ಮ ಅಪೂರ್ವ ಕಂಠಸಿರಿಯಿಂದ  ಸಂಗೀತ ಕ್ಷೇತ್ರಕ್ಕೆ ಅನುಪಮ ಕೊಡುಗೆ ಸಲ್ಲಿಸಿದ ಶ್ರೇಷ್ಠ ಕಲಾವಿದೆಯ ಅಗಲುವಿಕೆ ಕಲಾಕ್ಷೇತ್ರಕ್ಕೆ ದೊಡ್ಡ ನಷ್ಟ. ತಮ್ಮ ಸುಶ್ರಾವ್ಯ ಸಹಸ್ರ ಸಹಸ್ರ ಹಾಡುಗಳ ಮೂಲಕ ಕೋಟ್ಯಂತರ ಜನರ ಮನೆ- ಮನಸ್ಸುಗಳಲ್ಲಿ ಬಹುಕಾಲ ಸ್ಮರಣೆಯಲ್ಲಿರುತ್ತಾರೆ.


ಅವರಿಗೆ ಗಾನ- ನಾಟ್ಯಲೋಲನಾದ ಶ್ರೀಕೃಷ್ಣ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ' ಎಂದು ತಿಳಿಸಿದ್ದಾರೆ.