ಕೇದಾರ ದೇವಳದಲ್ಲಿ ಮಳೆಗಾಗಿ ಪ್ರಾರ್ಥನೆ

ಲೋಕಬಂಧು ನ್ಯೂಸ್ | ಉಡುಪಿ, ಜು.18
ಉದ್ಯಾವರ ಕೇದಾರ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಹರಿಹರ ಘಟಕ ಹಾಗೂ ದೇವಾಲಯಗಳ ಸಂವರ್ಧನ ಸಮಿತಿ ಉಡುಪಿ, ಕರಸೇವಕರ ತಂಡ ವತಿಯಿಂದ ಯಥೇಚ್ಛ ಮಳೆಗಾಗಿ ಪ್ರಾರ್ಥಿಸಿ ಶ್ರೀದೇವರಿಗೆ ಪ್ರಸನ್ನಪೂಜೆ, ಕಲ್ಪೋಕ್ತ ಪೂಜೆ, ದೀಪಾರಾಧನೆ ಸೇವೆ, ಸಿಯಾಳ ಅಭಿಷೇಕ ನಡೆಸಲಾಯಿತು.
ದೇವಾಲಯದ ಪ್ರಧಾನ ಅರ್ಚಕ ಸುಧೀಂದ್ರ ಉಪಾಧ್ಯಾಯ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಳೆಯ ಅಭಾವ ಹಿನ್ನೆಲೆಯಲ್ಲಿ ಯಥೇಚ್ಛ ಮಳೆಗಾಗಿ ಹಾಗೂ ಪ್ರಾಕೃತಿಕ ವಿಕೋಪಗಳು ನಡೆಯದಂತೆ ಸುಭಿಕ್ಷೆಗಾಗಿ ಪ್ರಾರ್ಥಿಸಲಾಯಿತು.


ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಘಟಕ ಸಂತೋಷ್ ಸುವರ್ಣ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಅಧ್ಯಕ್ಷ ವಿಶ್ವನಾಥ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಜಯಕರ ಗಾಣಿಗ, ಬಜರಂಗದಳದ ಘಟಕ ಸಂಯೋಜಕ ಜಯೇಂದ್ರ ಸುವರ್ಣ, ಶ್ರೀಬ್ರಹ್ಮ ಬೈದರ್ಕಳ ಗರಡಿಯ ಗುರಿಕಾರ ವೇಣುಗೋಪಾಲ ಉದ್ಯಾವರ, ಮಾಜಿ ಅಧ್ಯಕ್ಷ ದಿನೇಶ್ ಎಂ. ಸಾಲ್ಯಾನ್, ಗಾಣಿಗ ಸಮಾಜದ ಮುಖಂಡ ಶಿವರಾಮ ಗಾಣಿಗ ಕೇದಾರ್, ಉದ್ಯಾವರ ಶ್ರೀ ಭಗವತಿ ಸಮಾಜದ ಮಹಿಳಾ ಘಟಕ ಅಧ್ಯಕ್ಷೆ ಮಾಲತಿ ಭಾಸ್ಕರ್, ಅರ್ಚಕರಾದ ಸುಬ್ರಹ್ಮಣ್ಯ ಪಾಡಿತ್ತಾಯ ಮಾಂಗೋಡು, ಗುರುಪ್ರಸಾದ್ ಭಟ್ ಮಾಂಗೋಡು ಮತ್ತು ರಂಜನ್ ಉಪಾಧ್ಯಾಯ, ಸಂಜೀವ ಪೂಜಾರಿ, ಕರಸೇವಕರ ತಂಡದ ಪ್ರವೀಣ್ ಉಮನಪಾಡಿ, ದಕ್ಷಿತ್ ಸುವರ್ಣ, ಪುರುಷೋತ್ತಮ ಗಾಣಿಗ, ಕಿಶೋರ್ ವಿ. ಸಾಲ್ಯಾನ್, ಲೋಕೇಶ್, ಯೋಗೀಶ್, ಮಾತೃ ಶಕ್ತಿಯ ಇಂದಿರಾ ಶಿವಾನಂದ, ಜ್ಯೋತಿ ಪ್ರವೀಣ್, ಶೋಭಾ ಜಯಕರ್, ಪ್ರಿಯಾಂಕ ಸಂತೋಷ್, ಗೀತಾ ರಮೇಶ್, ಗುಲಾಬಿ ಗಾಣಿಗ, ಗೀತಾ ವಿಠಲ್, ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ದಿನೇಶ ಉಮನಪಾಡಿ, ಪರಮೇಶ್ವರ ಗುಡ್ಡೆಅಂಗಡಿ. ದಿನೇಶ್ ಎಸ್. ಕೋಟ್ಯಾನ್, ಮೊಗವೀರ ಯುವ ಸಂಘಟನೆಯ ಸಂತೋಷ್ ಕುಮಾರ್, ಅಶ್ವಿನಿ ಉದಯ ಶೆಟ್ಟಿ, ಜಯರಾಮ ಆಚಾರ್ಯ ಕೇದಾರ್, ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಸರೋಜಾ ಸುಧಾಕರ್ ಮೊದಲಾದವರಿದ್ದರು.