
ಪುತ್ತಿಗೆ ಪರ್ಯಾಯಕ್ಕೆ ಮುಖ್ಯಮಂತ್ರಿಗೆ ಆಹ್ವಾನ
Sunday, October 29, 2023
ಉಡುಪಿ, ಅ. 28 (ಲೋಕಬಂಧು ವಾರ್ತೆ): ಮುಂಬರುವ ಜನವರಿ 18ರಂದು ನಡೆಯುವ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವಕ್ಕೆ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರನ್ನು ಪರ್ಯಾಯ ಸ್ವಾಗತ ಸಮಿತಿ ಪರವಾಗಿ ಪುತ್ತಿಗೆ ಮಠದ ಸಂತೋಷ್ ಪಿ. ಶೆಟ್ಟಿ ತೆಂಕರಗುತ್ತು ಆಹ್ವಾನಿಸಿದರು.
ಕೆಪಿಸಿಸಿ ಕೋ ಆರ್ಡಿನೇಟರ್ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಜಿ. ಕುಮಾರ್ ಗೌಡ ಜೊತೆಗಿದ್ದರು.
ಆಮಂತ್ರಣ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪುತ್ತಿಗೆ ಶ್ರೀಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪರ್ಯಾಯ ಮಹೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.
ಸ್ವಾಗತ ಸಮಿತಿಯ ನಿಯೋಗಕ್ಕೆ ಬೆಂಗಳೂರಿಗೆ ಬರುವಂತೆ ಆಮಂತ್ರಿಸಿದರು