-->
ಮೋಡದ ಮರೆಯಲ್ಲಿ ಗ್ರಹಣ ವೀಕ್ಷಣೆ

ಮೋಡದ ಮರೆಯಲ್ಲಿ ಗ್ರಹಣ ವೀಕ್ಷಣೆ

ಉಡುಪಿ, ಅ. 29 (ಲೋಕಬಂಧು ವಾರ್ತೆ): ಶನಿವಾರ ರಾತ್ರಿ ಸಂಭವಿಸಿದ ಪಾರ್ಶ್ವ ಚಂದ್ರ ಗ್ರಹಣವನ್ನು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಏರ್ಪಡಿಸಿದ್ದ ಗ್ರಹಣ ವೀಕ್ಷಣೆ ಕಾರ್ಯಕ್ರಮದಲ್ಲಿ ವೀಕ್ಷಿಸಲಾಯಿತು.
ರಾತ್ರಿ 11:31 ಗಂಟೆಗೆ ಅರೆನೆರಳಿನ ಹಂತದಿಂದ ಗ್ರಹಣ ಪ್ರಾರಂಭಗೊಂಡಿತು. ರಾತ್ರಿ 1 ಗಂಟೆಗೆ ಚಂದ್ರನ ಮೇಲೆ ಭೂಮಿಯ ನೆರಳು ಕಾಣಲು ಪ್ರಾರಂಭವಾಯಿತು.
1.44ಕ್ಕೆ ಗರಿಷ್ಠ ಗ್ರಹಣ ಹಂತ ಗೋಚರಿಸಿತು.

ನಂತರ 2 ಗಂಟೆ ಸುಮಾರಿಗೆ ಚಂದ್ರ ಮೋಡಗಳಿಂದ ಆವೃತವಾಗಿದ್ದು, ಗ್ರಹಣ ವೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಅತುಲ್ ಭಟ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article