
ಖಾಸಗಿ ಫೈನಾನ್ಸ್ ಮಾಲಕ ಮುರಳೀಧರ ಬಲ್ಲಾಳ್ ನಿಧನ
Thursday, February 20, 2025
ಲೋಕಬಂಧು ನ್ಯೂಸ್
ಉಡುಪಿ, ಫೆ.20: ನಗರದ ಖಾಸಗಿ ಫೈನಾನ್ಸ್ ಮಾಲಕ ಮುರಳೀಧರ ಬಲ್ಲಾಳ್ (56) ಗುರುವಾರ ಹೃದಯಾಘಾತದಿಂದ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಉಡುಪಿ ಮಿತ್ರ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ಬಲ್ಲಾಳ್ ಫೈನಾನ್ಸ್ ಎಂಬ ಖಾಸಗಿ ಹಣಕಾಸು ಸಂಸ್ಥೆ ನಡೆಸುತ್ತಿದ್ದರು. ಅವರು ಕಿನ್ನಿಮೂಲ್ಕಿ ಕನ್ನರ್ಪಾಡಿ ನಿವಾಸಿ.
ವಿಪರೀತ ಬೆವರಿ, ಸುಸ್ತು ಎಂದು ಮನೆಯವರಲ್ಲಿ ಹೇಳುತ್ತಿದ್ದಂತೆಯೇ ಕುಸಿದುಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿತಾದರೂ ಅದಾಗಲೇ ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ದೃಢಪಡಿಸಿದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮುರಳೀಧರ ಬಲ್ಲಾಳ್ ಕೊಡುಗೈ ದಾನಿಯಾಗಿದ್ದು, ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಳ ಜೀರ್ಣೋದ್ಧಾರ ಕಾರ್ಯದಲ್ಲಿ ಸಕ್ರಿಯರಾಗಿ ಜನಾನುರಾಗಿಯಾಗಿದ್ದರು.
ಅವರ ನಿಧನಕ್ಕೆ ಕಿನ್ನಿಮೂಲ್ಕಿ- ಕನ್ನರ್ಪಾಡಿ ವಲಯ ಬ್ರಾಹ್ಮಣ ಸಭಾ ಸಂತಾಪ ವ್ಯಕ್ತಪಡಿಸಿದೆ.