ಬಂಧಿತರಿಗೆ ಶಿಕ್ಷೆ ನೀಡಬೇಡಿ
Friday, March 21, 2025
ಲೋಕಬಂಧು ನ್ಯೂಸ್
ಉಡುಪಿ: ಮೀನು ಕದ್ದ ಆರೋಪದಲ್ಲಿ ಮರಕ್ಕೆ ಕಟ್ಟಿಹಾಕಿ ನಮಹಿಳೆಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಬಂಧಿಸಲಾಗಿದ್ದು, ಅವರಿಗೆ ಏ.2ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 164 ಮಂದಿಯ ಹೇಳಿಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ.ಈಮಧ್ಯೆ ಪ್ರಕರಣದ ಸಂತ್ರಸ್ಥೆ, ಬಂಧಿತರಿಗೆ ಯಾವುದೇ ಶಿಕ್ಷೆ ವಿಧಿಸಬೇಡಿ. ನಾನು ತಪ್ಪು ಒಪ್ಪಿಕೊಳ್ಳುತ್ತೇನೆ. ಉಭಯತ್ರರೂ ರಾಜೀ ಸಂಧಾನದ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುತ್ತೇವೆ.
ನನಗೆ ಉಡುಪಿಯಲ್ಲಿ ವ್ಯವಹಾರ ಕಷ್ಟಸಾಧ್ಯ. ಹಾಗಾಗಿ ನಾನು ತನ್ನೂರಾದ ಹೂವಿನಹಡಗಲಿಗೆ ತೆರಳುವುದಾಗಿ ಶುಕ್ರವಾರ ಮಾಧ್ಯಮದವರಿಗೆ ತಿಳಿಸಿದ್ದಾರೆ.