
ನಿಭಾಯಿಸಲಾಗದಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ
Friday, March 21, 2025
ಲೋಕಬಂಧು ನ್ಯೂಸ್
ಉಡುಪಿ: ಮಲ್ಪೆಯಲ್ಲಿ ನಡೆದ ಮಹಿಳಾ ದೌರ್ಜನ್ಯ ಪ್ರಕರಣಕ್ಕೆ ಮೀನುಗಾರಿಕೆ ಇಲಾಖೆಯನ್ನು ಹೊಣೆಯನ್ನಾಗಿಸಿದ ಉಡುಪಿ ಶಾಸಕ ಯಶಪಾಲ್ ಸುವರ್ಣ ನಡೆ ಖಂಡನೀಯ. ಶಾಸಕನಾಗಿ ಪರಿಸ್ಥಿತಿಯನ್ನು ನಿಭಾಯಿಸಬೇಕಿತ್ತು. ಅದು ಬಿಟ್ಟು ಸದನದಲ್ಲಿದ್ದೆ ಎಂಬ ಹಾರಿಕೆ ಉತ್ತರ ನೀಡುವುದು ಅವರಿಗೆ ಶೋಭೆ ತರುವಂಥದಲ್ಲ. ಪರಿಸ್ಥಿತಿ ನಿಭಾಯಿಸಲಾಗದಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಮತ್ತೊಮ್ಮೆ ಚುನಾವಣೆ ನಡೆಯಲಿ ಎಂದು ಕಾಂಗ್ರೆಸ್ ನಾಯಕ ಪ್ರಸಾದ್ ರಾಜ್ ಕಾಂಚನ್ ಗುಡುಗಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ನಡೆದ ಮಾಹಿತಿ ಬಂದ ಕೂಡಲೇ ತಾನು ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಿದ್ದೆ. ಪರಿಸ್ಥಿತಿ ಕೈಮೀರಿ ಹೋಗಿರುವ ವಿಚಾರ ತಿಳಿಸಿದರು. ಘಟನೆ ಉದ್ದೇಶಪೂರ್ವಕವಾಗಿರದೇ ನಿರಂತರ ಮೀನು ಕಳ್ಳತನದಿಂದ ರೋಸಿ ಹೋಗಿದ್ದ ಮೀನುಗಾರರು ನಡೆಸಿದ ಆಕ್ರೋಶಭರಿತ ನಡೆ ಅದಾಗಿತ್ತು ಎಂದರು.
ಮಾ.22ರಂದು ನಡೆಸಲುದ್ದೇಶಿಸಿರುವ ಮೀನುಗಾರರ ಪ್ರತಿಭಟನೆ ಕೈಬಿಡುವಂತೆ ಮೀನುಗಾರ ಸಮುದಾಯದವನಾಗಿ ನಾನು ವಿನಂತಿಸಿರುವುದಾಗಿ ಕಾಂಚನ್ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ವಿಪಕ್ಷ ನಾಯಕ ರಮೇಶ ಕಾಂಚನ್ ಇದ್ದರು.