-->
ಜೀವ ಜಡ ಜಗತ್ತನ್ನು ಸೀಮಿತ ಪರಿಧಿಯೊಳಗೆ ಸೆರೆಹಿಡಿವಾತ ಸಮರ್ಥ ಛಾಯಾಗ್ರಾಹಕ

ಜೀವ ಜಡ ಜಗತ್ತನ್ನು ಸೀಮಿತ ಪರಿಧಿಯೊಳಗೆ ಸೆರೆಹಿಡಿವಾತ ಸಮರ್ಥ ಛಾಯಾಗ್ರಾಹಕ

ಲೋಕಬಂಧು ನ್ಯೂಸ್
ಉಡುಪಿ: ದಿನನಿತ್ಯದ ಆಗುಹೋಗುಗಳನ್ನು ತಮ್ಮ ಕ್ಯಾಮರಾ ಕಣ್ಣೊಳಗೆ ಸಮರ್ಪಕವಾಗಿ ಹಿಡಿದಿಡುವ ಸಾಮರ್ಥ್ಯವಿರುವುದು ಛಾಯಾಚಿತ್ರಗ್ರಾಹಕನಿಗೆ ಮಾತ್ರ. ಜೀವ ಜಡ ಜಗತ್ತನ್ನು ಸೀಮಿತ ಪರಿಧಿಯೊಳಗೆ ಸೆರೆ ಹಿಡಿವಾತ ಸಮರ್ಥ ಛಾಯಾಚಿತ್ರಗ್ರಾಹಕ ಎಂದು ಛಾಯಾಚಿತ್ರ ಪತ್ರಕರ್ತ ಜನಾರ್ದನ ಕೊಡವೂರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಎನ್ಎಸ್ಎಸ್ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದಲ್ಲಿ ಛಾಯಾಚಿತ್ರಗಳ ಪಾತ್ರ ವಿಷಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.


ಛಾಯಾಚಿತ್ರವೊಂದು ಸುದ್ದಿಯನ್ನು ತಿಳಿಸಬಲ್ಲುದು ಎಂಬ ಮಾತು ಮಾಧ್ಯಮ ಕ್ಷೇತ್ರದಲ್ಲಿದೆ. ಸುದ್ದಿ ಮತ್ತು ಚಿತ್ರ ಮಾಧ್ಯಮದ ಎರಡು ಕಣ್ಣುಗಳಿದ್ದಂತೆ ಒಂದಕ್ಕೊಂದು ಪೂರಕ ಎಂದರು.


ಇಂದು ವಿಶಾಲವಾದ ಜಗತ್ತಿನ ಅತಿದೊಡ್ಡ ಜಾಲ ಎನಿಸಿದ ಛಾಯಾಚಿತ್ರಗ್ರಹಣದಲ್ಲಿ ಯುವ ಮನಸ್ಸುಗಳಿಗೆ ವಿಪುಲ ಅವಕಾಶಗಳಿವೆ. ಪತ್ರಿಕಾರಂಗ ಸೇರಿದಂತೆ ಮಾಧ್ಯಮದ ಎಲ್ಲಾ  ಕ್ಷೇತ್ರಗಳಲ್ಲಿಯೂ ಛಾಯಾಗ್ರಹಣಕ್ಕೆ  ಇರುವ ಸವಾಲುಗಳನ್ನು ಗಮನಿಸಿಕೊಂಡು ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ನೆಲೆಯೂರುವ ಪ್ರಯತ್ನ ಮಾಡಬೇಕಿದೆ ಎಂದರು.


ಕಾಲೇಜಿನ ಪ್ರಾಂಶುಪಾಲೆ ಡಾ. ಸುಕನ್ಯಾ ಮೇರಿ ಜೆ. ಅಧ್ಯಕ್ಷತೆ ವಹಿಸಿದ್ದರು.


ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿ, ನಿರೂಪಿಸಿದರು. ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಚಿರಂಜನ್ ಕೆ. ಶೇರಿಗಾರ್ ವಂದಿಸಿದರು.

Ads on article

Advertise in articles 1

advertising articles 2

Advertise under the article