ಏ.20: ಮಲ್ಪೆ ಬೀಚ್ ನಲ್ಲಿ ಕಲ್ಕೂರ ಫೆಸ್ಟಿವಲ್
Wednesday, April 16, 2025
ಲೋಕಬಂಧು ನ್ಯೂಸ್
ಉಡುಪಿ: ಕಲ್ಕೂರ ರೆಫ್ರಿಜರೇಶನ್ ಮತ್ತು ಕಿಚನ್ ಇಕ್ವಿಮೆಂಟ್ಸ್ ಸಂಸ್ಥೆ ವತಿಯಿಂದ ಏಪ್ರಿಲ್ 20ರಂದು ಮಲ್ಪೆ ಬೀಚ್‌ನಲ್ಲಿ ಕಲ್ಕೂರ ಬೀಚ್ ಫೆಸ್ಟಿವಲ್ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆ ಆಡಳಿತ ನಿರ್ದೇಶಕ ರಂಜನ್ ಕಲ್ಕೂರ, ಸಂಸ್ಥೆಯ 40ನೇ ವರ್ಷಾಚರಣೆ ಅಂಗವಾಗಿ ಕಲ್ಕೂರ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್‌ನ 5 ಅಪಾರ್ಟ್ ಮೆಂಟ್ ಗಳಿಗೆ ಮನೆಯ ಒಳಗಿನ ಇಂಟಿರೀಯರ್ಸ್ ಸ್ಪರ್ಧೆ ಏರ್ಪಡಿಸಿ ಅದರಲ್ಲಿ 75 ಪ್ರಶಸ್ತಿ ಘೋಷಿಸಿದ್ದು, ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ತರಾನಾ ಸಂಗೀತ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಶಾಸಕರು, ಸಂಸದರು, ಗ್ರಾಹಕರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಒಟ್ಟು 60 ಮಂದಿ ಅತಿಥಿಗಳು ವೇದಿಕೆಯಲ್ಲಿರಲಿದ್ದಾರೆ.
ಸುಮಾರು 15 ಸಾವಿರ ಜನಕ್ಕೆ ಆಹಾರದ ವ್ಯವಸ್ಥೆ ಮಾಡಲಾಗುವುದು. ಅಧಿಕೃತ ಸಭಾ ಕಾರ್ಯಕ್ರಮ ಇರುವುದಿಲ್ಲ. ಸಂಜೆ 4ರಿಂದ 10ರ ವರೆಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ರಂಜನ್ ಕಲ್ಕೂರ ಪುತ್ರ ರಾಹುಲ್ ಮಾತನಾಡಿ, ತಂದೆಯವರ 60ನೇ ವರ್ಷದ ಷಷ್ಟ್ಯಬ್ದಿಪೂರ್ತಿ ಅಂಗವಾಗಿ ಶಾಂತಿ ಸಮಾರಂಭ ಇದೇ ವೇದಿಕೆಯಲ್ಲಿ ನಡೆಯಲಿದೆ. ಅವರು ತಮ್ಮ 20ನೇ ವರ್ಷದಲ್ಲಿ ಸ್ವಂತ ಉದ್ದಿಮೆ ಆರಂಭಿಸಿ 40 ವರ್ಷ ಪೂರ್ಣಗೊಂಡಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಿರಿಯ ಪುತ್ರ ರುಶಾಲ್ ಕಲ್ಕೂರ, ಸಹೋದರ ಹರೀಶ್ ಕಲ್ಕೂರ, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಕಾಂತ್ ಕೆ.ಎನ್., ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ಇದ್ದರು.