ಏ.19: ಅಶ್ವತ್ಥಪುರಕ್ಕೆ ಶೃಂಗೇರಿ ಶ್ರೀ
Wednesday, April 16, 2025
ಲೋಕಬಂಧು ನ್ಯೂಸ್
ಮೂಡುಬಿದಿರೆ: ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಏಪ್ರಿಲ್19ರಂದು ಅಶ್ವತ್ಥಪುರಕ್ಕೆ ಆಗಮಿಸುವರು.ಅಂದು ಸಂಜೆ 5 ಗಂಟೆಗೆ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುವುದು. ಬಳಿಕ 'ಶ್ರೀ ಅಭಿನವ ವಿದ್ಯಾತೀರ್ಥ ನಿಲಯ' ಗುರುಭವನ ಉದ್ಘಾಟನೆ, ಶ್ರೀಗಳಿಗೆ ಬಿನ್ನವತ್ತಳೆ ಸಮರ್ಪಣೆ, ಶ್ರೀಗಳಿಂದ ಆಶೀರ್ವಚನ, ಸಮಸ್ತರಿಗೂ ಫಲಮಂತ್ರಾಕ್ಷತೆ ವಿತರಣೆ ನಡೆದು ನೂತನ ಗುರುಭವನದಲ್ಲಿ ಶ್ರೀಚಂದ್ರಮೌಳೀಶ್ವರ ಪೂಜೆ ನೆರವೇರಿಸುವರು.
ಏ.20ರಂದು ಬೆಳಿಗ್ಗೆ 8ರಿಂದ ಸ್ಥಳಾಂತರಿತ ಗುಡಿಯಲ್ಲಿ ಶ್ರೀರಾಮೇಶ್ವರ ದೇವರ ಪುನಃಪ್ರತಿಷ್ಠೆ, ಬಳಿಕ ಶ್ರೀ ರಾಮ ತಾರಕ ಹೋಮ ಪೂರ್ಣಾಹುತಿಯಲ್ಲಿ ಭಾಗವಹಿಸಿ, ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಪರಿಷತ್ ನೂತನ ಕಟ್ಟಡ ಉದ್ಘಾಟಿಸಿ, ಬೆಳ್ತಂಗಡಿಗೆ ತೆರಳುವರು ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.