
ಮೇ 15ರಿಂದ ಗುರುಮಹಾಕಾಲೇಶ್ವರ ಬ್ರಹ್ಮಕಲಶೋತ್ಸವ
Monday, May 5, 2025
ಲೋಕಬಂಧು ನ್ಯೂಸ್
ಉಡುಪಿ: ದ.ಕ ಜಿಲ್ಲೆಯ ಗುರುಪುರದ ಶ್ರೀ ಗುರುಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟಿನ ಶ್ರೀ ಗುರುಮಹಾಕಾಲೇಶ್ವರ ದೇವಸ್ಥಾನದಲ್ಲಿ ಮೇ 15ರಿಂದ 17ರ ವರೆಗೆ 3 ದಿನಗಳ ಕಾಲ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಸಂಸದ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವೇದ ಕೃಷಿಕ ಬ್ರಹ್ಮಋಷಿ ಕೆ.ಎಸ್.ನಿತ್ಯಾನಂದ ಮಾರ್ಗದರ್ಶನದಲ್ಲಿ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿಯ ಪತ್ರಿಷ್ಠಾ ಬ್ರಹ್ಮಕಲಶೋತ್ಸವ ನೆರವೇರಲಿದೆ.
16ರಂದು ಸಂಜೆ ನಡೆಯಲಿರುವ ಪಂಚಕಲ್ಯಾಣಯುಕ್ತ ಬ್ರಹ್ಮಕಲಶಾಭಿಷೇಕ ಕಾರ್ಯದಲ್ಲಿ ಜಾತಿ, ಪಂಗಡ, ಲಿಂಗ ಭೇದ ಇಲ್ಲದೇ ಭಾಗವಹಿಸಬಹುದಾಗಿದೆ. ದೇವರ ಬೃಹತ್ ಏಕಶಿಲಾ ಮೂರ್ತಿಗೆ ಪಂಚಕಲ್ಯಾಣ ಸ್ವರೂಪದ ಕಲಶಾಭಿಷೇಕ ಸಮರ್ಪಿಸಬಹುದು ಎಂದರು.
17ರಂದು ಸಂಜೆ 6 ಗಂಟೆಗೆ ಶಿವಾನುಭವ ಮಂಟಪದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ವೇದ ಕೃಷಿಕ ಬ್ರಹ್ಮಋಷಿ ಕೆ.ಎಸ್.ನಿತ್ಯಾನಂದ ಸಾನಿಧ್ಯ ವಹಿಸಲಿದ್ದಾರೆ. ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಪಾವಂಜೆ ಕ್ಷೇತ್ರದ ಯಾಜಿ ನಿರಂಜನ್ ಭಟ್ ಉದ್ಘಾಟಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗೋಳಿದಡಿ ಗುತ್ತಿನ ಗುರಿಕಾರ ವರ್ಧಮಾನ ದುರ್ಗಾ ಪ್ರಸಾದ್ ಶೆಟ್ಟಿ, ಪ್ರಮುಖರಾದ ರೋಹಿತ್ ಕುಮಾರ್ ಕಟೀಲ್, ಚಂದ್ರಹಾಸ್ ಆಮೀನ್, ಸುಜಾತ ಸದಾಶಿವ, ದಿವಾಕರ್ ಉಪಸ್ಥಿತರಿದ್ದರು