ರಾಕ್ಷಸನ ಪ್ರತಿಕೃತಿ‌ ಕಾಂಗ್ರೆಸ್‌ಗೆ ಹೆಮ್ಮೆಯೇ?

ಲೋಕಬಂಧು ನ್ಯೂಸ್ | ಉಡುಪಿ, ಜು.31
ಶಾಸಕ ಯಶಪಾಲ್ ಸುವರ್ಣ ವಿರುದ್ಧದ ಪ್ರತಿಭಟನೆಯಲ್ಲಿ ರಾಕ್ಷಸನ ರೀತಿಯಲ್ಲಿ ಉಡುಪಿ ಶಾಸಕರ ಪ್ರತಿಕೃತಿ ಮಾಡಿದ್ದು ಉಡುಪಿಯ‌ ಕಾಂಗ್ರೆಸಿಗರು ಹಾಗೂ‌ ಕಾಂಗ್ರೆಸ್ ಪಕ್ಷಕ್ಕೆ ಹೆಮ್ಮೆಯೇ ಎಂದು ಶ್ರೀರಾಮಸೇನೆಯ ಮಂಗಳೂರು ವಿಭಾಗ ಅಧ್ಯಕ್ಷ ಜಯರಾಮ್ ಅಂಬೆಕಲ್ಲು ಪ್ರಶ್ನಿಸಿದ್ದಾರೆ.
ಶುಕ್ರವಾರ ಹೇಳಿಕೆ ನೀಡಿರುವ ಅವರು, ಕಳೆದ ಮಂಗಳವಾರ ಕಾಕ್ರೋಚ್ ವಿರುದ್ದ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಉಡುಪಿ ಶಾಸಕರು ಕಾಕ್ರೋಚ್ ಬೆಂಬಲಿಸಿದವರ ಬಗ್ಗೆ ಮಾತನಾಡಿದ್ದಾರೆ. ಅದು ಸತ್ಯ ಅಲ್ವೇ? ಅದನ್ನು ಅರಗಿಸಿಕೊಳ್ಳಲು ರಾಷ್ಟ್ರೀಯ ಪಕ್ಷಕ್ಕೆ ಆಗುತ್ತಿಲ್ಲವೇ? ಶಾಸಕರ ಮೇಲೆ ಪ್ರಥಮ ತನಿಖಾ ವರದಿ ಸಲ್ಲಿಸಲು ಕಾರಣವೇನು ಎಂದು ಅಂಬೆಕಲ್ಲು ಪ್ರಶ್ನಿಸಿದ್ದಾರೆ.


ಈ ಹಿಂದೆ ಪ್ರಧಾನಮಂತ್ರಿಯನ್ನು ಅವಹೇಳನ ಮಾಡಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ನಿಮ್ಮ ರಾಷ್ಟ್ರೀಯ ನಾಯಕರ ಬಗ್ಗೆ ನೀವೇಕೆ ಮೌನವಾದಿರಿ? ಅದಾವುದೋ ನಟನ ಬಗ್ಗೆ ಹೇಳಿದರೆ ನಿಮಗೆ ನೋವು ಯಾಕೆ?ಪ್ರಧಾನ ಮಂತ್ರಿ ಬಗ್ಗೆ ನಿಮ್ಮವರೇ ಅವಹೇಳನ ಮಾಡಿದಾಗ ನಿಮ್ಮ ಅನುಕಂಪ ಎಲ್ಲಿ ಹೋಯಿತು ಎಂದು ಪ್ರಶ್ನೆಗಳ ಸರಮಾಲೆಯನ್ನೇ ಮುಂದೊಡ್ಡಿದ ಜಯರಾಮ್ ಅಂಬೆಕಲ್ಲು, ಸಾಮಾಜಿಕ ಜಾಲತಾಣದಲ್ಲಿ ಬರುವ ನಿಮ್ಮ ಜಿರಳೆಗಳ ಸ್ಪಂದನೆ ನೋಡುವಾಗ ಕಾಂಗ್ರೆಸ್ ಪಕ್ಷದ ಬಗ್ಗೆ ಅನುಕಂಪ ಬರುತ್ತಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.


ಹಿಂದೂ ಸಾಮ್ರಾಟ್' ಯಶಪಾಲ್
ಯಶಪಾಲ್ ಸುವರ್ಣ ಹಿಂಬಾಗಿಲ ಮೂಲಕ  ಪ್ರವೇಶ ಮಾಡಿಲ್ಲ. ಲಕ್ಷಾಂತರ ಹಿಂದೂ ಹೃದಯಗಳ ಮತವೇ ಅವರು ಶಾಸಕರಾಗಲು ಕಾರಣ. ಕರಾವಳಿಯ 'ಹಿಂದೂ ಸಾಮ್ರಾಟ್' ಯಶಪಾಲ್ ಸುವರ್ಣ ಅವರನ್ನು ಅವಹೇಳನ ಮಾಡಬೇಡಿ. ಅವರ ಆದರ್ಶವನ್ನು ಪಾಲಿಸಿ ಎಂದು ಕಾಂಗ್ರೆಸ್‌ಗೆ ಬುದ್ದಿಮಾತು ಹೇಳುವುದಾಗಿ ತಿಳಿಸಿದ ಅಂಬೆಕಲ್ಲು, ಶ್ರೀರಾಮಸೇನೆ ಉಡುಪಿ ಶಾಸಕ ಯಶಪಾಲ್ ಅವರೊಂದಿಗೆ ಸದಾ ಇರುತ್ತದೆ ಎಂದು ತಿಳಿಸಿದ್ದಾರೆ.