ಉಡುಪಿ, ಅ. 29 (ಲೋಕಬಂಧು ವಾರ್ತೆ): ರಾಷ್ಟೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್) ವತಿಯಿಂದ ವಿಜಯ ದಶಮಿ ಪಥ ಸಂಚಲನ ನಗರದಲ್ಲಿ ಭಾನುವಾರ ನಡೆಯಿತು.
ಸುಮಾರು 500ಕ್ಕೂ ಅಧಿಕ ಗಣವೇಷಧಾರಿ ಸ್ವಯಂಸೇವಕರು ಭಾಗವಹಿಸಿದ್ದರು.
ಮಾತೆಯರು ಅಲ್ಲಲ್ಲಿ ಭಗವಾಧ್ವಜಕ್ಕೆ ಪುಷ್ಪಾರ್ಚನೆ ನಡೆಸಿದರು.
ಪಥಸಂಚಲನ ಕಲ್ಪನಾ ಟಾಕೀಸ್ ಬಳಿಯ ಉಡುಪಿ ಸಂಘ ಕಾರ್ಯಾಲಯದಿಂದ ಹೊರಟು ಮಹಾತ್ಮ ಗಾಂಧಿ ರಸ್ತೆ ಮೂಲಕ ಸರ್ವಿಸ್ ಬಸ್ ನಿಲ್ದಾಣ, ಹೋಟೆಲ್ ಕಿದಿಯೂರು ಎದುರಿನ ರಸ್ತೆ ಮೂಲಕ ಹಾದು ತ್ರಿವೇಣಿ ವೃತ್ತ, ಅಂಚೆ ಕಛೇರಿ, ಚಿತ್ತಾರoಜನ ಸರ್ಕಲ್, ಕೆಇಬಿ ರಸ್ತೆಯಿಂದ ಸಂಘ ಕಾರ್ಯಾಲಯ ತಲುಪಿ ಸಮಾಪನಗೊಂಡಿತು.