ಎರಡು ಪ್ರಶಸ್ತಿಗೆ ಭಾಜನರಾದ ಅನಿತಾ ಸಿಕ್ವೇರ
Monday, November 13, 2023
ಉಡುಪಿ, ನ.13 (ಲೋಕಬಂಧು ವಾರ್ತೆ): ಕಳೆದ ಸುಮಾರು 25 ವರ್ಷದಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವ ಅನಿತಾ ಸಿಕ್ವೇರ ಉಡುಪಿ ಅವರಿಗೆ ರಾಜ್ಯ ಮಟ್ಟದ ಎರಡು ಪ್ರಶಸ್ತಿಗಳು ಒಲಿದು ಬಂದಿವೆ.ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಮಂಡ್ಯ ಜಿಲ್ಲಾ ಬರಹಗಾರರ ಸಂಘ ಮಂಡ್ಯ ವತಿಯಿಂದ ನೀಡುವ ರಾಜ್ಯ ಮಟ್ಟದ ಸಾಹಿತ್ಯ ಸಿರಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಮಂಡ್ಯ ಗಾಂಧಿ ಭವನದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಡ್ಯ ಬರಹಗಾರರ ಸಂಘದ ಅಧ್ಯಕ್ಷ ಉಮೇಶ್, ಕಾರ್ಯದರ್ಶಿ ರೂಪ ಮೊದಲಾದವರಿದ್ದರು.
ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ- ಬೆಳಗಾವಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಸಂಯುಕ್ತಾಶ್ರಯದಲ್ಲಿ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆದ ರಾಜ್ಯ ಮಟ್ಟದ ಕಥಾ ಉತ್ಸವದಲ್ಲಿ ಕಾಗೆ ಮತ್ತು ಪಾರಿವಾಳ ಎಂಬ ಸ್ವರಚಿತ ಮಕ್ಕಳ ನೀತಿ ಕಥೆ ವಾಚನಕ್ಕಾಗಿ ರಾಜ್ಯ ಮಟ್ಟದ ಕಥಾ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.