ಉಡುಪಿ, ನ.13 (
ಲೋಕಬಂಧು ವಾರ್ತೆ): ಮಾಜಿ ಸಚಿವ, ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಮನೆಯ ಗೋಧಾಮಲ್ಲಿ ಸೋಮವಾರ ಗೋಪೂಜೆ ನಡೆಸಲಾಯಿತು.
ಸ್ವತಃ ಗೋಪ್ರೇಮಿಯಾಗಿರುವ ಪ್ರಮೋದ್ ಮಧ್ವರಾಜ್ ಕಳೆದ ಅನೇಕ ವರ್ಷಗಳಿಂದ ತನ್ನ ಮನೆಯಲ್ಲಿ ಗೋವುಗಳನ್ನು ಸಲಹುತ್ತಿದ್ದಾರೆ.
ಕೊಳಲಗಿರಿಯಲ್ಲಿನ ತನ್ನ ನಿವಾಸದಲ್ಲಿ ಗೋವುಗಳಿಗಾಗಿ ಪ್ರತ್ಯೇಕ ಗೋಧಾಮ ನಿರ್ಮಿಸಿ, ವಿಫುಲ ಗಾಳಿ, ಬೆಳಕಿಗೆ ಆಧುನಿಕ ವ್ಯವಸ್ಥೆ ಕಲ್ಪಿಸಿ ತನ್ನ ಅಪ್ರತಿಮ ಗೋಪ್ರೇಮ ಮೆರೆದಿದ್ದಾರೆ.
ವರ್ಷಂಪ್ರತಿಯಂತೆ ದೀಪಾವಳಿ ಸಂದರ್ಭದಲ್ಲಿ ಗೋಪೂಜೆ ನೆರವೇರಿಸಿದ್ದು ಪತ್ನಿ ಸುಪ್ರಿಯಾ ಪ್ರಮೋದ್, ಪುತ್ರಿ ಪ್ರತ್ಯಕ್ಷ ರಾಜ್ ಜೊತೆಗೂಡಿ ಗೋಪೂಜೆ ನಡೆಸಿ, ಗೋಗ್ರಾಸ ನೀಡಿದರು.