-->
Ayodhya: ಗಿನ್ನೆಸ್ ದಾಖಲೆ ಬರೆದ ಅಯೋಧ್ಯೆ ದೀಪೋತ್ಸವ

Ayodhya: ಗಿನ್ನೆಸ್ ದಾಖಲೆ ಬರೆದ ಅಯೋಧ್ಯೆ ದೀಪೋತ್ಸವ

ಲಕ್ನೋ, ನ. 11 (ಲೋಕಬಂಧು ವಾರ್ತೆ): ದೀಪಾವಳಿಯ ಮುನ್ನಾದಿನದಂದು ಶನಿವಾರ ಶ್ರೀರಾಮ ಜನ್ಮಭೂಮಿ ಉತ್ತರ ಪ್ರದೇಶದ ಅಯೋಧ್ಯೆ ದೀಪೋತ್ಸವ ಹೊಸ ಗಿನ್ನೆಸ್ ವಿಶ್ವ ದಾಖಲೆ ಮಾಡಿದೆ.ಸರಯೂ ನದಿಯ 51 ಘಾಟ್‌ಗಳಲ್ಲಿ 24 ಲಕ್ಷ ದೀಪಗಳನ್ನು ಉತ್ತರ ಪ್ರದೇಶ ಸರಕಾರ ಬೆಳಗಿಸಿದೆ.

ಅಪರಾಹ್ನ 3 ಗಂಟೆಯಿಂದೇ ಹಣತೆ ಬೆಳಗುವ ಕಾರ್ಯಕ್ರಮ ಆರಂಭಿಸಲಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುಮಾರು 25 ಸಾವಿರ ಮಂದಿ ಸ್ವಯಂಸೇವಕರು 24 ಲಕ್ಷ ದೀಪಗಳನ್ನು ಬೆಳಗಿದರು.

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತಂಡ ದೀಪೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಡ್ರೋನ್ ಕ್ಯಾಮೆರಾದೊಂದಿಗೆ ದೀಪಗಳನ್ನು ಎಣಿಸುವ ಕಾರ್ಯ ನಡೆಸಿತು.
ಉತ್ತರ ಪ್ರದೇಶ ಸರ್ಕಾರದ ಬಹುತೇಕ ಎಲ್ಲಾ ಕ್ಯಾಬಿನೆಟ್ ಸಚಿವರು ಪಾಲ್ಗೊಂಡಿದ್ದರು.

Ads on article

Advertise in articles 1

advertising articles 2

Advertise under the article