Krishna Math: ಕೃಷ್ಣಮಠದಲ್ಲಿ ಜಲಪೂರಣ ಪೂಜೆ ಸಂಪನ್ನ
Saturday, November 11, 2023
ಉಡುಪಿ, ನ.11 (ಲೋಕಬಂಧು ವಾರ್ತೆ): ಇಲ್ಲಿನ ಶ್ರೀಕೃಷ್ಣಮಠದಲ್ಲಿ ಶನಿವಾರ ನೀರು ತುಂಬುವ (ಜಲ ಪೂರಣ) ಹಬ್ಬ ನಡೆಯಿತು.ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಹಾಗೂ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.ಪರ್ಯಾಯ ಮಠದ ಪುರೋಹಿತ ಶ್ರೀನಿವಾಸ ಉಪಾಧ್ಯಾಯ ನೇತೃತ್ವದಲ್ಲಿ ದೀಪಾವಳಿಯ ನೀರು ತುಂಬುವ ಹಬ್ಬದ ವಿಶೇಷ ಪೂಜೆ ನೆರವೇರಿತು.