
ಬೈಕ್ ಡೂಮ್ ನಲ್ಲಿ ಅಡಗಿತ್ತು ಉರಗ!
Wednesday, July 3, 2024
ಬೈಕ್ ಡೂಮ್ ನಲ್ಲಿ ಅಡಗಿತ್ತು ಉರಗ!
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಬೈಕ್ ಡೂಮ್ ನಲ್ಲಿ ಮರಿ ಹೆಬ್ಬಾವನ್ನು ಕಂಡು ಸವಾರ ಬೆಚ್ಚಿಬಿದ್ದ ಘಟನೆ ಉಡುಪಿ ನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಮಣಿಪಾಲದ ರಾಹುಲ್ ಎಂಬವರು ಕಿನ್ನಿಮೂಲ್ಕಿ ಪೆಟ್ರೋಲ್ ಬಂಕ್ ಬಳಿ ಬೈಕ್ ನಿಲ್ಲಿಸಿ ಡ್ರೈವಿಂಗ್ ಕೆಲಸಕ್ಕೆ ಹೋಗಿದ್ದರು.
ರಾತ್ರಿ 8.30ರ ಸುಮಾರಿಗೆ ಕೆಲಸ ಮುಗಿಸಿ ವಾಪಾಸ್ಸು ಬಂದು ಬೈಕ್ ಮೂಲಕ ಹೊರಟಾಗ ಉಡುಪಿ ಜೋಡುಕಟ್ಟೆ ಬಳಿ ಬೈಕ್ ಡೂಮ್‌ನಲ್ಲಿ ಮಲಗಿದ್ದ ಹಾವು ಕಂಡು ಬೆಚ್ಚಿಬಿದ್ದರು.
ಕೂಡಲೇ ಬೈಕ್ ನಿಲ್ಲಿಸಿದ ಅವರು, ಅರಣ್ಯ ಇಲಾಖೆ ಮೂಲಕ ಪ್ರಾಣೇಶ್ ಪರ್ಕಳ ಎಂಬವರಿಗೆ ಕರೆ ಮಾಡಿ ಹಾವು ಇರುವ ಮಾಹಿತಿ ನೀಡಿದರು.
ಸ್ಥಳಕ್ಕೆ ಬಂದ ಪ್ರಾಣೇಶ್ ಪರಿಶೀಲಿಸಿದಾಗ ಅದು ಹೆಬ್ಬಾವಿನ ಮರಿ ಎಂಬುದು ಖಚಿತವಾಯಿತು.
ಬಳಿಕ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಬಿಡಲಾಯಿತು.