
ಮಾಹೆ-ಆಕ್ಲೆಂಡ್ ವಿವಿ ನಡುವೆ ಒಡಂಬಡಿಕೆ
Thursday, March 20, 2025
ಲೋಕಬಂಧು ನ್ಯೂಸ್
ಉಡುಪಿ: ವಿದ್ಯಾರ್ಥಿ, ಪ್ರಾಧ್ಯಾಪಕರ ವಿನಿಮಯ ಮತ್ತು ಶೈಕ್ಷಣಿಕ ಕಾರ್ಯಕ್ರಮ ಹಾಗೂ ಸಂಶೋಧನೆಗೆ ಸಂಬಂಧಿಸಿದಂತೆ ಮಣಿಪಾಲ ಮಾಹೆ ವಿ.ವಿ., ನ್ಯೂಜಿಲ್ಯಾಂಡ್‌ನ ಆಕ್ಲೆಂಡ್ ವಿ.ವಿ.ಯೊಂದಿಗೆ ಹೊಸ ಒಡಂಬಡಿಕೆ ಮಾಡಿಕೊಂಡಿದೆ.
ನ್ಯೂಜಿಲ್ಯಾಂಡ್‌ನ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಅವರ ಭಾರತಕ್ಕೆ ಅಧಿಕೃತ ಭೇಟಿ ಸಂದರ್ಭದಲ್ಲಿ ನವದೆಹಲಿ ಐಐಟಿಯ ಹೌಜ್ ಖಾಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಮಾಹೆ ಕುಲಪತಿ ಲೆ.ಜ. ಡಾ. ಎಂ.ಡಿ.ವೆಂಕಟೇಶ್ ಅವರು ನ್ಯೂಜಿಲ್ಯಾಂಡ್‌ನ ಪ್ರಧಾನಿ ಸಮ್ಮುಖದಲ್ಲಿ ಆಕ್ಲೆಂಡ್ ವಿ.ವಿ. ಕುಲಪತಿ ಪ್ರೊ.ಡಾನ್ ಫ್ರೆಶ್‌ವಾಟರ್ ಅವರೊಂದಿಗೆ ಪತ್ರಕ್ಕೆ ಸಹಿ ಹಾಕಿದರು.
ನ್ಯೂಜಿಲ್ಯಾಂಡ್ ಶಿಕ್ಷಣದ ಸಿಇಒ ಅಮಂಡಾ ಮಾಲು ಮತ್ತು ಐಐಟಿ ನವದೆಹಲಿ ನಿರ್ದೇಶಕ ಪ್ರೊ. ರಂಜನ್ ಬ್ಯಾನರ್ಜಿ, ಮಾಹೆ ಬೆಂಗಳೂರು ಕ್ಯಾಂಪಸ್ ಸಹಕುಲಪತಿ ಡಾ. ಮಧು ವೀರರಾಘವನ್, ಎಂಐಟಿ ಬೆಂಗಳೂರಿನ ನಿರ್ದೇಶಕ ಡಾ. ಐವನ್ ಜೋಸ್ ಮತ್ತು ಮಾಹೆ ಅಂತಾರಾಷ್ಟ್ರೀಯ ಸಹಯೋಗದ ನಿರ್ದೇಶಕ ಡಾ.ಅನುಪ್ ನಹಾ ಇದ್ದರು.