ಅಕಲಂಕ ಪ್ರಶಸ್ತಿಗೆ ಆಯ್ಕೆ
Saturday, March 8, 2025
ಲೋಕಬಂಧು ನ್ಯೂಸ್
ಉಡುಪಿ: ಖ್ಯಾತ ಸಾಹಿತಿ ಹಾಗೂ ಭಾಷಾಂತರಕಾರ ಡಾ.ಎನ್. ತಿರುಮಲೇಶ್ವರ ಭಟ್ಟ ಅವರಿಗೆ ಉಪ್ಪಂಗಳ ರಾಮ ಭಟ್ ಮತ್ತು ಶಂಕರಿ ಆರ್. ಭಟ್ ದತ್ತಿನಿಧಿಯಿಂದ ನೀಡುವ 2024ನೇ ಸಾಲಿನ ಅಕಲಂಕ ಪ್ರಶಸ್ತಿ ನೀಡಲಾಗುವುದು ಎಂದು ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ.ಮಾರ್ಚ್ 23ರಂದು ಅಪರಾಹ್ನ 3 ಗಂಟೆಗೆ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಎನ್.ಟಿ. ಭಟ್ ಎಂದೇ ಖ್ಯಾತರಾಗಿರುವ ಎನ್. ತಿರುಮಲೇಶ್ವರ ಭಟ್ ಕನ್ನಡದಿಂದ ಜರ್ಮನ್ ಭಾಷೆಗೆ, ಜರ್ಮನ್ ಭಾಷೆಯಿಂದ ಕನ್ನಡಕ್ಕೆ ಅಂತೆಯೇ ಇಂಗ್ಲಿಷಿನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲಿಷಿಗೆ ಭಾಷಾಂತರ ಮಾಡಿದ ಅನುಭವಿ.
ಮಂಟೇಸ್ವಾಮಿ ಕಾವ್ಯ, ಜುಂಜಪ್ಪ ಕಾವ್ಯ, ಶ್ರೀರಾಮಾಶ್ವಮೇಧಂ, ಹರಿಹರನ ರಗಳೆಗಳು, ಮಲ್ಲಿಕಾರ್ಜುನ ಖರ್ಗೆ, ಪರ್ಣಶಾಲೆ, ಮುಖಾಂತರ, ಧರ್ಮಯುದ್ಧ, ಭಾರತಕಥಾ, ನೆನಪೇ ಸಂಗೀತ, ಪಂಪಭಾರತ ಮೊದಲಾದವುಗಳನ್ನು ಭಾಷಾಂತರ ಮಾಡಿದ್ದಾರೆ.
ಅವರಿಗೆ ಜರ್ಮನ್ ಅಧ್ಯಕ್ಷರ ಪುರಸ್ಕಾರ, ಸೇಡಿಯಾಪು ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ (ಅನುವಾದಕ್ಕಾಗಿ), ಸರಿಗಮ ಭಾರತಿ ಪುರಸ್ಕಾರ ಸಂದಿವೆ.