ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತನಾಗ್
Tuesday, May 27, 2025
ಲೋಕಬಂಧು ನ್ಯೂಸ್, ನವದೆಹಲಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದ್ದು, ನಟ ಅನಂತನಾಗ್ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು.ಇಂದು ಎರಡನೇ ಕಂತಿನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು ಈ ವರ್ಷ ಒಟ್ಟು 7 ಪದ್ಮವಿಭೂಷಣ, 19 ಪದ್ಮಭೂಷಣ ಹಾಗೂ 113 ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿತ್ತು. ಆ ಪೈಕಿ, ಮೊದಲ ಕಂತಿನಲ್ಲಿ 71 ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ಇಂದು 68 ಗಣ್ಯರಿಗೆ ಪದ್ಮ ಪ್ರಶಸ್ತಿ ನೀಡಲಾಗಿದ್ದು ಆ ಪೈಕಿ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೆ.ಎಸ್. ಖೇಹರ್, ಕುಮುದಿನಿ ರಜನಿಕಾಂತ್ ಲಖಿಯಾ ಅವರಿಗೆ ಪದ್ಮವಿಭೂಷಣ, ಜತಿನ್ ಗೋಸ್ವಾಮಿ, ಕೈಲಾಶ್ ನಾಥ್ ದೀಕ್ಷಿತ್, ಸಾದ್ವಿ ಋತಂಭರ ಅವರಿಗೆ ಪದ್ಮಭೂಷಣ ಮತ್ತು ಮಂದಕೃಷ್ಣ ಮದಿಗ, ಡಾ. ನೀರಜ್ ಭಾಟ್ಲಾ, ಸಂತಾರಾಮ್ ದೇಸ್ವಲ್ ಮತ್ತು ಸೈಯ್ಯದ್ ಐನುಲ್ ಹಸನ್ ಪದ್ಮಪ್ರಶಸ್ತಿ ಪಡೆದ ಪ್ರಮುಖರಾಗಿದ್ದಾರೆ.