ಕಂಬಳದ ಕೋಣಗಳು ಅಗ್ನಿಗಾಹುತಿ
Saturday, May 31, 2025
ಲೋಕಬಂಧು ನ್ಯೂಸ್
ಕಾರ್ಕಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್'ನಿಂದ ಹಟ್ಟಿಗೆ ಬೆಂಕಿ ತಗುಲಿ ಎರಡು ಕಂಬಳದ ಕೋಣಗಳು ಸುಟ್ಟು ಕರಕಲಾದ ಘಟನೆ ಕಾರ್ಕಳ ತಾಲೂಕಿನ ಕಾಂತಾವರ ಬೇಲಾಡಿ ಎಂಬಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.ಬೇಲಾಡಿ ಬಾವ ಅಶೋಕ್ ಶೆಟ್ಟಿ ಮನೆಯಲ್ಲಿ ಈ ದುರ್ಘಟನೆ ನಡೆದಿದೆ.
ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಶಾರ್ಟ್ ಸರ್ಕ್ಯೂಟ್'ನಿಂದ ಅಗ್ನಿ ಅವಘಡ ಉಂಟಾಗಿದ್ದು, ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಹಟ್ಟಿಗೆ ವ್ಯಾಪಿಸಿದದ್ದು, ಅದರಿಂದ ಅಪ್ಪು ಮತ್ತು ತೋನ್ಸೆ ಹೆಸರಿನ ಎರಡು ಕಂಬಳ ಕೋಣಗಳು ಬೆಂಕಿಗಾಹುತಿಯಾಗಿವೆ.