ಐಫೋನ್ ರಫ್ತು; ಚೀನಾ ಹಿಂದಿಕ್ಕಿದ ಭಾರತ
Thursday, May 29, 2025
ಲೋಕಬಂಧು ನ್ಯೂಸ್, ನವದೆಹಲಿ
ಅಮೆರಿಕಕ್ಕೆ ಐಫೋನ್ ರಫ್ತು ಮಾಡುವುದರಲ್ಲಿ ಚೀನಾವನ್ನು ಭಾರತ ಹಿಂದಿಕ್ಕಿದೆ. ಇಂಥದ್ದೊಂದು ಬೆಳವಣಿಗೆ ಇತಿಹಾಸದಲ್ಲೇ ಇದೇ ಮೊದಲು.2025ರ ಏಪ್ರಿಲ್ ತಿಂಗಳಲ್ಲಿ ಭಾರತ ಬರೋಬ್ಬರಿ 33 ಲಕ್ಷ ಐಫೋನ್‌ಗಳನ್ನು ಅಮೆರಿಕಕ್ಕೆ ರಫ್ತು ಮಾಡಿತ್ತು. ಅದೇ ತಿಂಗಳಲ್ಲಿ ಅಮೆರಿಕಕ್ಕೆ ಹೋದ ಮೇಡ್ ಇನ್ ಚೀನಾ ಐಫೋನ್‌ಗಳ ಸಂಖ್ಯೆ 9 ಲಕ್ಷ ಮಾತ್ರ. ಮಾರ್ಕೆಟ್ ರಿಸರ್ಚ್ ಸಂಸ್ಥೆಯಾದ ಕ್ಯಾನಾಲಿಸ್ ಬಿಡುಗಡೆ ಮಾಡಿದ ವರದಿಯಲ್ಲಿ ಈ ದತ್ತಾಂಶ ಕಂಡುಬಂದಿದೆ.
ಮಾರ್ಚ್ ತಿಂಗಳಿಂದ ಮೇಡ್ ಇನ್ ಇಂಡಿಯಾ ಐಫೋನ್‌ಗಳು ಅಮೆರಿಕಕ್ಕೆ ಹೋಗುತ್ತಿರುವ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.