ಯುವ ಬ್ರಾಹ್ಮಣ ಪರಿಷತ್ ಉದ್ಯಮ ಮೇಳ, ಆಹಾರ ಮೇಳ
Tuesday, May 27, 2025
ಲೋಕಬಂಧು ನ್ಯೂಸ್, ಉಡುಪಿ
ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ವೈಬಿಪಿ) ಆಶ್ರಯದಲ್ಲಿ ಯುವ ವಿಪ್ರ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಥಮ ಬಾರಿಗೆ ಉದ್ಯಮ ಮೇಳವನ್ನು ಗುಂಡಿಬೈಲು ಬ್ರಾಹ್ಮಿ ಸಭಾಭವನ ಆವರಣದಲ್ಲಿ ಆಯೋಜಿಸಲಾಗಿತ್ತು.ಜನೋಪಯೋಗಿ ಸುಮಾರು 20 ಆಕರ್ಷಕ ಮಳಿಗೆಗಳಿಗೆ ಉಚಿತವಾಗಿ ಅವಕಾಶ ನೀಡಲಾಯಿತು.
ಉದ್ಯಮ ಮಳಿಗೆಗಳನ್ನು ಸ್ಥಳೀಯ ಕೌನ್ಸಿಲರ್ ಹಾಗೂ ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ ಉದ್ಘಾಟಿಸಿ, ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಇಂಥ ಹಲವಾರು ಜನಹಿತ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಜನ ಮನ್ನಣೆ ಗಳಿಸಿದೆ. ಇಂಥ ಸಕ್ರಿಯ ಸಂಸ್ಥೆ ನಮ್ಮ ವಾರ್ಡಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಲಾದ ಆಹಾರ ಮೇಳವನ್ನು ಪಾಕಶಾಲಾ ಹೋಟೆಲ್ ಉದ್ಯಮ ಆಡಳಿತ ನಿರ್ದೇಶಕಿ ವಿನೋದ ವಾಸುದೇವ ಅಡಿಗ ಉದ್ಘಾಟಿಸಿ ಶುಭ ಹಾರೈಸಿದರು.
ಶ್ರೀಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಪರಿಷತ್ತಿನ ಮಾಜಿ ಅಧ್ಯಕ್ಷ ಎಂ. ಎಸ್. ವಿಷ್ಣು ಅಭ್ಯಾಗತರಾಗಿದ್ದರು.
ಪರಿಷತ್ ಅಧ್ಯಕ್ಷ ಚಂದ್ರಕಾಂತ ಕೆ. ಎನ್. ಸ್ವಾಗತಿಸಿದರು. ನಿಕಟ ಪೂರ್ವ ಅಧ್ಯಕ್ಷ ಚೈತನ್ಯ ಎಂ.ಜಿ., ಮಾಜಿ ಅಧ್ಯಕ್ಷ ವಿಷ್ಣು ಪ್ರಸಾದ್ ಪಾಡಿಗಾರ್, ಸಂಚಾಲಕ ರವಿರಾಜ್ ರಾವ್, ಕೆ. ರಘುಪತಿ ರಾವ್, ಮುರಳಿ ಅಡಿಗ, ಪ್ರವೀಣಾ ಉಪಾಧ್ಯಾಯ, ಸುಮನಾ ಆಚಾರ್ಯ, ಜ್ಯೋತಿಲಕ್ಷ್ಮಿ, ದೀಪಾ ರವಿರಾಜ್ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು.