-->
ಬಿಎಸ್ಎನ್ಎಲ್ 5ಜಿ ಸೇವೆ ಪ್ರಾರಂಭ

ಬಿಎಸ್ಎನ್ಎಲ್ 5ಜಿ ಸೇವೆ ಪ್ರಾರಂಭ

ಲೋಕಬಂಧು ನ್ಯೂಸ್, ನವದೆಹಲಿ
ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ದೇಶದ ಕೆಲವು ನಗರಗಳಲ್ಲಿ 5ಜಿ ಸೇವೆ ಪ್ರಾರಂಭಿಸಿದೆ.ದೇಶದ ಇನ್ನೂ ಹಲವು ಆಯ್ದ ನಗರಗಳಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಿದೆ.


ಅದಕ್ಕೂ ಮೊದಲು ಬಳಕೆದಾರರ ಸಲಹೆಯ ಮೇರೆಗೆ ಕಂಪನಿ ತನ್ನ 5ಜಿ ಸೇವೆಗೆ ಕ್ಯೂ-5ಜಿ ಅಂದರೆ ಕ್ವಾಂಟಮ್ 5ಜಿ ಎಂದು ಹೆಸರಿಸಲು ನಿರ್ಧರಿಸಿದೆ.


5ಜಿ ಸೇವೆಯನ್ನು ಇನ್ನೂ ವಾಣಿಜ್ಯೀಕರಣವಾಗಿ ಪ್ರಾರಂಭಿಸಲಾಗಿಲ್ಲ ಎಂದು ಬಿಎಸ್ಎನ್ಎಲ್ ಹೇಳಿಕೆ ನೀಡಿದೆ.


ಬಿಎಸ್ಎನ್ಎಲ್ ಇಂಡಿಯಾ ಮೂಲಕ ಕಂಪನಿಯ ಸಿಎಂಡಿ ರಾಬರ್ಟ್ ಜೆ. ರವಿ ಹೈದರಾಬಾದ್‌ನಲ್ಲಿ ಕ್ವಾಂಟಮ್ 5ಜಿಎಫ್.ಡಬ್ಲ್ಯೂಎ ಸೇವೆ ಪ್ರಾರಂಭಿಸಿದ್ದಾರೆ.


ಶೀಘ್ರದಲ್ಲೇ ಇತರ ನಗರಗಳಲ್ಲಿ ಇದನ್ನು ಪ್ರಾರಂಭಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article