ಬಂಕೇರಕಟ್ಟ ಸೇತುವೆ ಹೂಳು ತೆರವು
Sunday, June 1, 2025
ಲೋಕಬಂಧು ನ್ಯೂಸ್, ಉಡುಪಿ
ಅಂಬಲಪಾಡಿ ಗ್ರಾಮ ಪಂಚಾಯತ್ ಹಾಗೂ ಕಲ್ಮಾಡಿ ನಗರಸಭಾ ವ್ಯಾಪ್ತಿಯ ಗಡಿಭಾಗದಲ್ಲಿರುವ ಬಂಕೇರಕಟ್ಟ ಸೇತುವೆ ಕೆಳಭಾಗದಲ್ಲಿ ಸಂಗ್ರಹವಾಗಿ ನೀರು ಸರಾಗ ಹರಿಯಲು ಅಡ್ಡಿಯಾಗಿದ್ದ ಹೂಳನ್ನು ಶಾಸಕ ಯಶಪಾಲ್ ಸುವರ್ಣ ನೇತೃತ್ವದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಶ್ರಮದಾನ ನಡೆಸಿ ಹೂಳು, ಕಸ ಕಡ್ಡಿ ತೆರವುಗೊಳಿಸಿದರು.ಹಲವಾರು ವರ್ಷಗಳಿಂದ ಸೂಕ್ತ ನಿರ್ವಹಣೆ ಕೊರತೆಯಿಂದ ತುಂಬಿದ್ದ ಹೂಳನ್ನು ಹಿಟಾಚಿ, ಜೆಸಿಬಿ ಯಂತ್ರಗಳನ್ನು ಬಳಸಿ ತೆರವು ಮಾಡಿ ಟಿಪ್ಪರ್ ವಾಹನದ ಮೂಲಕ ಸ್ಥಳಾಂತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶಪಾಲ್ ಸುವರ್ಣ ಈ ಭಾಗದ ಜನತೆಯ ಬೇಡಿಕೆಯಂತೆ ಉದ್ಯಾವರದಿಂದ ಮಲ್ಪೆ ಭಾಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯಾಗಿರುವ ಬಂಕೇರಕಟ್ಟ ಸೇತುವೆಗೆ ಈಗಾಗಲೇ ಲೋಕೋಪಯೋಗಿ ಇಲಾಖೆ ಮೂಲಕ ನೂತನ ಸೇತುವೆ 5 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭೆ ಸದಸ್ಯ ಸುಂದರ ಕಲ್ಮಾಡಿ, ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಯೋಗೀಶ್, ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಪೂಜಾರಿ ಮತ್ತು ಹರೀಶ್ ಪಾಲನ್, ಪಕ್ಷ ಪ್ರಮುಖರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಭುವನೇಂದ್ರ, ಜಗದೀಶ್ ಕೋಟ್ಯಾನ್, ವಿವೇಕ್ ಕಲ್ಮಾಡಿ, ಗಿರೀಶ್ ಅಮೀನ್, ರಾಮ್ ರಾಜ್ ಕಿದಿಯೂರು, ಸದಾನಂದ ಜಿ. ಕಾಂಚನ್, ಪಾಂಡು, ಸುಧಾಕರ್ ಪೂಜಾರಿ, ನವೀನ್ ಸುವರ್ಣ, ಶಿವಾಜಿ ಸನಿಲ್, ವಿನಯ್ ಕಲ್ಮಾಡಿ, ಮಂಜು ಕೊಳ, ವಿಜಯ ಕುಂದರ್, ನವೀನ್ ಕಿದಿಯೂರು, ಸದಾನಂದ ಸುವರ್ಣ ಮೊದಲಾದವರಿದ್ದರು