
ಸೈನಿಕರ ಕಲ್ಯಾಣ ನಿಧಿಗೆ ಕೊಡುಗೆ
Friday, July 4, 2025
ಲೋಕಬಂಧು ನ್ಯೂಸ್, ಉಡುಪಿ
ಇಲ್ಲಿನ ಪುತ್ತೂರು ವಿದ್ಯಾನಿಧಿ ಸಮಿತಿಯಿಂದ ಕಲಿಕೆಗೆ ಸಹಾಯಧನ ವಿತರಣೆ ಹಾಗೂ ವಾರ್ಷಿಕ ಮಹಾಸಭೆ ಈಚೆಗೆ ನಡೆದಿದ್ದು, ಈ ಸಂದರ್ಭದಲ್ಲಿ ವಿದ್ಯಾನಿಧಿಯ ಆರೋಗ್ಯ ನಿಧಿಯಿಂದ ಮತ್ತು ದೇಶಭಕ್ತ ದಾನಿಗಳು ಕೊಡುಗೆಯಾಗಿ ನೀಡಿದ 2 ಲಕ್ಷದ 1 ಸಾವಿರ ರೂ. ದೇಣಿಗೆಯನ್ನು ಸೈನಿಕರ ಕಲ್ಯಾಣ ನಿಧಿಗೆ ನಿವೃತ್ತ ಸುಬೇದಾರ್ ರಘುಪತಿ ರಾವ್ ಮೂಲಕ ನೀಡಲಾಯಿತು.
ವೀಣಾ ಗಣೇಶ್ ಹತ್ವಾರ್ ಕುಂಭಾಶಿ ಚೆಕ್ ಹಸ್ತಾಂತರಿಸಿದರು.
ಮುಖ್ಯ ಅತಿಥಿ ಡಾ. ಪ್ರಕಾಶಾತ್ಮ ರಾವ್ ಬೆಳ್ಮಣ್ಣು, ಸಹಾಯಧನ ವಿತರಿಸಿದ ಉಂಡಾರು ವೆಂಕಟರಮಣ ಭಟ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮುರಳಿದರ ಭಟ್ ಸ್ವಾಗತಿಸಿ, ವಂದಿಸಿದರು. ವಿದ್ಯಾರ್ಥಿ ಸುಷೇಣ ಬಾಯರಿ ಸಹಕರಿಸಿದರು. ಡಾ.ಟಿ. ಶ್ರೀಧರ ಬಾಯರಿ ನಿರೂಪಿಸಿದರು.