-->
ಪ್ರಚೋದನಕಾರಿ ಹೇಳಿಕೆ ನೀಡಿದ ಕಡಂಬು ವಿರುದ್ಧ ಕೇಸು ದಾಖಲಿಸಿ

ಪ್ರಚೋದನಕಾರಿ ಹೇಳಿಕೆ ನೀಡಿದ ಕಡಂಬು ವಿರುದ್ಧ ಕೇಸು ದಾಖಲಿಸಿ

ಲೋಕಬಂಧು ನ್ಯೂಸ್, ಉಡುಪಿ
ಕುಂಜಾಲು ದನದ ರುಂಡ ಪತ್ತೆ ಪ್ರಕರಣದಲ್ಲಿ ಹಿಂದೂ ಸಂಘ ಪರಿವಾರ, ಬಿಜೆಪಿ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ ಪಾತ್ರವಿದೆ ಎಂದು ಆಧಾರ ರಹಿತ ಹೇಳಿಕೆ ನೀಡಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ವಿರುದ್ಧ ಸೋಮೊಟೊ ಕೇಸ್ ದಾಖಲಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಉಡುಪಿ ಗ್ರಾಮಾಂತರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗೌತಮ್ ಅಗ್ರಹಾರ ಆಗ್ರಹಿಸಿದ್ದಾರೆ.ಹಿಂದೂಗಳ ಪಾಲಿನ ಪವಿತ್ರ ಗೋಮಾತೆಯ ರುಂಡವನ್ನು ಎಸೆದು ಹೋದ ಅತ್ಯಂತ ಭಾವನಾತ್ಮಕ ಘಟನೆಯಿಂದ ಆತಂಕಕ್ಕೀಡಾಗಿರುವ ಜನತೆಯ ಭಾವನೆಗಳಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಉದ್ದೇಶದಿಂದ ಇಂಥ ಪ್ರಚೋದನಕಾರಿ ಹೇಳಿಕೆ ನೀಡುವ ಮತಾಂಧ ವ್ಯಕ್ತಿಗಳ ವಿರುದ್ಧ ಕೇಸು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು.


ಹಿಂದೂ ಮುಖಂಡ ಶರಣ್ ಪಂಪ್'ವೆಲ್ ಹೇಳಿಕೆ ಮೇಲೆ ಸ್ವಯಂ ಪ್ರೇರಿತ ಕೇಸು ದಾಖಲಿಸಿದ ಪೊಲೀಸ್ ಇಲಾಖೆ, ರಿಯಾಜ್ ಕಡಂಬು ವಿರುದ್ಧವೂ ತಕ್ಷಣ ಕೇಸು ದಾಖಲಿಸಬೇಕು. ಇಲ್ಲವಾದಲ್ಲಿ ಉಡುಪಿ ಗ್ರಾಮಾಂತರ ಬಿಜೆಪಿ ವತಿಯಿಂದ ಹೋರಾಟ ಮಾಡುವುದಾಗಿ ಅಗ್ರಹಾರ ಎಚ್ಚರಿಕೆ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article