
ಮಂಗಳೂರಿನಲ್ಲಿ ಮಿಲಿಟರಿ ಟ್ಯಾಂಕರ್ ಶೀಘ್ರ ಸ್ಥಾಪನೆ
Wednesday, July 9, 2025
ಲೋಕಬಂಧು ನ್ಯೂಸ್, ಮಂಗಳೂರು
ಜನರಲ್ಲಿ ದೇಶಾಭಿಮಾನ ಮತ್ತು ನಮ್ಮ ಸೇನೆಯ ಸಶಸ್ತ್ರ ಪರಿಕರಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಶೀಘ್ರ ಮಿಲಿಟರಿ ಟ್ಯಾಂಕರ್ ಸ್ಥಾಪನೆಯಾಗಲಿದೆ.
ಸ್ವಾತಂತ್ರ್ಯೋತ್ಸವ ವೇಳೆಗೆ ನಗರದ ಪ್ರಮುಖ ಸರ್ಕಲ್ ಬಳಿ ಈ ಮಿಲಿಟರಿ ಯುದ್ಧ ಟ್ಯಾಂಕರನ್ನು ಶಾಶ್ವತವಾಗಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುತ್ತದೆ.
ಸಂಸದ ಕ್ಯಾ.ಬ್ರಿಜೇಶ್ ಚೌಟ ವಿಶೇಷ ಮುತುವರ್ಜಿ ವಹಿಸಿದ್ದು ಪುಣೆಯಿಂದ ಮುಂದಿನ 2 ವಾರದೊಳಗೆ ಮಂಗಳೂರಿಗೆ ಈ ಸೇನಾ ಟ್ಯಾಂಕರ್ ಆಗಮಿಸಲಿದೆ. 70 ಟನ್ ತೂಕದ ಮಿಲಿಟರ್ ಟ್ಯಾಂಕರ್ ಸ್ಥಾಪನೆ ಮಂಗಳೂರು ನಗರಕ್ಕೆ ಹೊಸ ಕಳೆ ನೀಡಲಿದೆ.