Basavaraj Bommai: ಬೊಮ್ಮಾಯಿ ಭೇಟಿ ಮಾಡಿದ ವಿಜಯೇಂದ್ರ
Monday, November 13, 2023
ಬೆಂಗಳೂರು, ನ.13 (ಲೋಕಬಂಧು ವಾರ್ತೆ): ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸೋಮವಾರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಗೆ ಭೇಟಿ ನೀಡಿದರು.ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಬೊಮ್ಮಾಯಿ, ದೀಪಾವಳಿ ಶುಭಾಶಯ ಕೋರಿದರು.
ನಿಮ್ಮ ಸಂಘಟನಾತ್ಮಕ ಅವಧಿಯಲ್ಲಿ ಪಕ್ಷದ ಬೇರುಗಳು ಮತ್ತಷ್ಟು ಸದೃಢಗೊಳ್ಳಲಿ ಎಂದು ಬೊಮ್ಮಾಯಿ ಹಾರೈಸಿದರು.
ಪಕ್ಷ ಸಂಘಟನೆ ಬಗ್ಗೆ ಉಭಯತ್ರರೂ ಚರ್ಚಿಸಿದರು.
ಬುಧವಾರ ನ.15ರಂದು ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದಾಗಿ ವಿಜಯೇಂದ್ರ ತಿಳಿಸಿದರು.