ಉಡುಪಿ, ನ.13 (
ಲೋಕಬಂಧು ವಾರ್ತೆ): ದೀಪಾವಳಿ ಸಂದರ್ಭದಲ್ಲಿ ಉಡುಪಿಯ ನಿಕಟಪೂರ್ವ ಶಾಸಕ ಕೆ. ರಘುಪತಿ ಭಟ್ ಅವರ ಕರಂಬಳ್ಳಿ ನಿವಾಸದಲ್ಲಿ ಗೋಪೂಜೆ ನಡೆಯಿತು.
ಸ್ವತಃ ರಘುಪತಿ ಭಟ್ ಮಡಿ ಪಂಚೆಯುಟ್ಟು ಗೋಪೂಜೆ ನೆರವೇರಿಸಿದರು.
ಹಿಂದೂ ಧರ್ಮದಲ್ಲಿ ಗೋ ಪೂಜೆಗೆ ಮಹತ್ವ ಇದ್ದು, ಅದು ಸರ್ವ ಶ್ರೇಷ್ಠ ಎನಿಸಿದೆ.
ಗೋಮಾತೆ ನಾಡಿಗೆ ಕಲ್ಯಾಣವುಂಟುಮಾಡಲಿ ಎಂದು ಹಾರೈಸಿ ಕುಟುಂಬ ಸಮೇತರಾಗಿ ಗೋಪೂಜೆ ನೆರವೇರಿಸಿರುವುದಾಗಿ ಅವರು ತಿಳಿಸಿದರು.