
ಮಣಿಪಾಲ ಮಾಹೆ ನೂತನ ಸಿಓಓ ಡಾ.ರವಿರಾಜ ನೇಮಕ
Wednesday, July 3, 2024
ಮಣಿಪಾಲ ಮಾಹೆ ನೂತನ ಸಿಓಓ ಡಾ.ರವಿರಾಜ ನೇಮಕ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ನೂತನ ಮುಖ್ಯ ನಿರ್ವಹಣಾಧಿಕಾರಿ (ಸಿಓಓ)ಯಾಗಿ ಡಾ. ರವಿರಾಜ ಎನ್. ಸೀತಾರಾಮ್ ನೇಮಕಗೊಂಡಿದ್ದಾರೆ.
ಅವರು ಈ ಹಿಂದೆ ಇಂಡಿಯಾ ಇನ್ ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಮತ್ತು ಪರಿಗಣಿತ ವಿಶ್ವವಿದ್ಯಾನಿಲಯದ ನಿರ್ದೇಶಕ ಹಾಗೂ ಯೋಜನೆ ಮತ್ತು ಮಾನಿಟರಿಂಗ್ ಆಗಿದ್ದರು.
ಡಾ. ರವಿರಾಜ ಅವರು ಮಾಹೆಯ ಶೈಕ್ಷಣಿಕೇತರ ಕ್ರಿಯಾತ್ಮಕ ವಿಭಾಗಗಳಾದ ಸಾಮಾನ್ಯ ಸೇವೆಗಳು, ಖರೀದಿ, ಯೋಜನೆಗಳು, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ರೂಪಾಂತರ, ಮಾನವ ಸಂಪನ್ಮೂಲಗಳು, ಕಾನೂನು, ಕಾರ್ಪೊರೇಟ್ ಸಂಬಂಧಗಳು, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ, ಹಾಸ್ಟೆಲ್ ಗಳು ಮತ್ತು ಕ್ಯಾಂಪಸ್ ಸುರಕ್ಷತೆ, ಸಾರ್ವಜನಿಕರ ಕಾರ್ಯಾಚರಣೆ ದಕ್ಷತೆ ಹೆಚ್ಚಿಸುವತ್ತ ಗಮನಹರಿಸುವರು.
ಅವರು 1993ರಲ್ಲಿ ಜೈವಿಕ ವಿಜ್ಞಾನದಲ್ಲಿ ಎಂ.ಎಸ್ಸಿ. ಮತ್ತು 1997ರಲ್ಲಿ ಜೈವಿಕ ವಿಜ್ಞಾನ (ಸೂಕ್ಷ್ಮ ಜೀವಶಾಸ್ತ್ರ)ದಲ್ಲಿ ಡಾಕ್ಟರೇಟ್ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ.
ಕಾರ್ಯಾಚರಣೆ ನಿರ್ವಹಣೆಯಲ್ಲಿ ಎಂಬಿಎ, ಕೆನಡಾದ ಮೌಂಟ್ ಆಲಿಸನ್ ವಿಶ್ವವಿದ್ಯಾಲಯ ಮತ್ತು ಆಲ್ಬರ್ಟ್ ಐನ್ ಸ್ಟೈನ್ ಕಾಲೇಜ್ ಆಫ್ ಮೆಡಿಸಿನ್ ನಲ್ಲಿ ಪೋಸ್ಟ್ ಡಾಕ್ಟರಲ್ ತರಬೇತಿ ಪಡೆದ ಅವರು, 2008ರ ವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ನ್ಯೂಯಾರ್ಕ್ ಮಾಂಟೆಫಿಯೋರ್ ವೈದ್ಯಕೀಯ ಕೇಂದ್ರ/ ಆಲ್ಬರ್ಟ್ ಐನ್ ಸ್ಟೈನ್ ಕ್ಯಾನ್ಸರ್ ಕೇಂದ್ರದಲ್ಲಿ 2010ರ ವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
2020ರಲ್ಲಿ ಮಣಿಪಾಲ ಮಾಹೆ ಕಾರ್ಪೊರೇಟ್ ಸಂಬಂಧಗಳ ಸ್ಥಾಪಕ ನಿರ್ದೇಶಕ, ಬಳಿಕ ಮಣಿಪಾಲ್ ಸೆಂಟರ್ ಫಾರ್ ಬಯೋಥೆರಪ್ಯೂಟಿಕ್ಸ್ ರಿಸರ್ಚ್ ನಲ್ಲಿ ಪ್ರೊಫೆಸರ್ ಮತ್ತು ಸಂಯೋಜಕರಾಗಿ ನೇಮಕಗೊಂಡರು.
ಅವರ ನಾಯಕತ್ವದಲ್ಲಿ ಎಂಸಿಬಿಆರ್ ಕೇಂದ್ರ, ಮಾಹೆ ಮತ್ತು ಭಾರತದ ಪ್ರಮುಖ ಸಂಶೋಧನಾ ಕೇಂದ್ರವಾಗಿ ಹೊರಹೊಮ್ಮಿತು.
2023ರ ಮಾರ್ಚ್ ನಲ್ಲಿ ಅವರು ಯೋಜನೆ ಮತ್ತು ಮಾನಿಟರಿಂಗ್ ವಿಭಾಗದಲ್ಲಿ ನಿರ್ದೇಶಕರಾಗಿ ನೇಮಕಗೊಂಡರು.