ಮಣಿಪಾಲ ಪರ್ಕಳ ರಸ್ತೆ ಬೀದಿ ದೀಪ ಉದ್ಘಾಟನೆ
Friday, September 6, 2024
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಉಡುಪಿ ನಗರಸಭಾ ವ್ಯಾಪ್ತಿಯ ಮಣಿಪಾಲ- ಪರ್ಕಳ ಮುಖ್ಯ ರಸ್ತೆಯಲ್ಲಿ ನೂತನವಾಗಿ ಅಳವಡಿಸಿದ ಬೀದಿ ದೀಪ ಉದ್ಘಾಟನೆಯನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ಸೆ.5ರಂದು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗೌರಿ ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಬೀದಿ ದೀಪದ ಉದ್ಘಾಟನೆ ನೆರವೇರಿಸುವ ಮೂಲಕ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.
ಉಡುಪಿ ಕರಾವಳಿ ಬೈಪಾಸಿನಿಂದ ಪರ್ಕಳ ಗಡಿಭಾಗದ ವರೆಗೆ ದಾರಿ ದೀಪ ವ್ಯವಸ್ಥೆ ಪೂರ್ಣಗೊಂಡಿದ್ದು ಸುಗಮ ಸಂಚಾರಕ್ಕೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಮಣಿಪಾಲ ಎಂಐಟಿ ಬಳಿಯಿಂದ ಪರ್ಕಳ ನಗರಸಭೆಯ ಗಡಿಭಾಗದ ವರೆಗೆ 117 ಬೀದಿ ದೀಪಗಳನ್ನು ಉಡುಪಿ ನಗರಸಭೆ ಮತ್ತು ಭಾರದ್ವಾಜ್ ಎಂಟರ್ ಪ್ರೈಸಸ್ ಸಹಭಾಗಿತ್ವದಲ್ಲಿ ಅಳವಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯರಾದ ಸುಮಿತ್ರಾ ನಾಯಕ್, ಅಶ್ವಿನಿ ಅರುಣ್, ವಿಜಯಲಕ್ಷ್ಮೀ, ಮಂಜುನಾಥ ಮಣಿಪಾಲ, ಬಾಲಕೃಷ್ಣ ಶೆಟ್ಟಿ, ಟಿ. ಜಿ. ಹೆಗ್ಡೆ, ಹರೀಶ್ ಶೆಟ್ಟಿ, ಗಿರಿಧರ ಆಚಾರ್ಯ, ಗಿರೀಶ್ ಅಂಚನ್ ಮತ್ತು ಯೋಗೀಶ್ ಸಾಲ್ಯಾನ್, ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಸ್ಥಳೀಯರಾದ ದಿಲೀಪ್ ಹೆಗ್ಡೆ, ಹೇಮಂತ ಕುಮಾರ್ ಯು., ದೇವು ಪೂಜಾರಿ, ಅಕ್ಷಿತ್ ಶೆಟ್ಟಿ ಹೆರ್ಗ ಮೊದಲಾದವರಿದ್ದರು.