-->
ಮಾರಿಯಮ್ಮ ಕ್ಷೇತ್ರ ನಾಡಿನ ಜನತೆಯ ಆಶ್ರಯ ತಾಣವಾಗಲಿ

ಮಾರಿಯಮ್ಮ ಕ್ಷೇತ್ರ ನಾಡಿನ ಜನತೆಯ ಆಶ್ರಯ ತಾಣವಾಗಲಿ

ಲೋಕಬಂಧು ನ್ಯೂಸ್
ಕಾಪು: ಸಮರ್ಪಕವಾಗಿ ಮಾತ್ರವಲ್ಲದೇ, ಸಮಗ್ರವಾಗಿ ಜೋರ್ಣೋದ್ಧಾರಗೊಂಡಿರುವ ಕಾಪು ಶ್ರೀ ಮಾರಿಯಮ್ಮನ ಕ್ಷೇತ್ರ ಪ್ರತಿಯೊಂದು ವಿಚಾರದಲ್ಲೂ ನಾಡಿನ ಜನರಿಗೆ ಆಶ್ರಯ ತಾಣವಾಗಲಿ. ಸಂಪತ್ತಿನ ಸದ್ವಿನಿಯೋಗಕ್ಕೆ ವೇದಿಕೆಯಾಗಲಿ ಎಂದು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶಿಸಿದರು.
ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ 7ನೇ ದಿನದ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.


ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತನಾಡಿ, ದೇಶ ಮುಂದಡಿ ಇಡುತ್ತಿದೆ. ಮೂಲ ವೈಭವನ್ನು ಕಾಪು ಪಡೆದುಕ್ಕೊಳ್ಳುವಲ್ಲಿ ಅಮ್ಮನ ಗದ್ದುಗೆ ಒಂದೊಂದೇ ಪ್ರತಿಷ್ಠಾಪನೆಯ ಹೆಜ್ಜೆ, ಬ್ರಹ್ಮಕಲಶೋತ್ಸವ ವೈಭವಪೂರ್ಣ ಸಂಸ್ಕೃತಿಗೆ ಸಿಗುತ್ತಿರುವ ಸ್ಥಾನಮಾನದ ಸಂಕೇತ ಎಂದರು.


ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.


ಸಂಸದೆ ಕಂಗನಾ ರಾಣವತ್, ಶಾಸಕರಾದ ಡಾ.ಧನಂಜಯ ಸರ್ಜಿ, ಭಾಗೀರಥಿ ಮುರುಳ್ಯ, ಮಾಜಿ ಸಚಿವರಾದ ರಮಾನಾಥ ರೈ ಮತ್ತು ಪ್ರಮೋದ್ ಮಧ್ವರಾಜ್, ಕಾಪು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಕ್ರಂ ಕಾಪು, ವಕೀಲ ಮಹೇಶ್ ಕೋಟ್ಯಾನ್, ಉದ್ಯಮಿ ಹರಿಯಪ್ಪ ಕೋಟ್ಯಾನ್, ಮಾಧವ ಆರ್. ಪಾಲನ್, ಪ್ರೇಮನಾಥ್ ಶೆಟ್ಟಿ ದುಬೈ, ಸುಂದರ್ ಶೆಟ್ಟಿ ಅಬುದಾಬಿ ಉಪಸ್ಥಿತರಿದ್ದರು.


ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿದರು.ಅಶೋಕ್ ಪಕ್ಕಳ ಮತ್ತು ದಾಮೋದರ ಶರ್ಮ ನಿರೂಪಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನೃತ್ಯ ಸಂಭ್ರಮ, ನಾಟಕ ಪ್ರದರ್ಶನ, ನೃತ್ಯ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದವರಿಂದ ಶಿವ ಮಹಿಮೆ ಕಿರು ನಾಟಕ, ಗಾನ ನೃತ್ಯ ಅಕಾಡೆಮಿ ಮಂಗಳೂರು ವಿದ್ಯಾಶ್ರೀ ರಾಧಾಕೃಷ್ಣ ಮತ್ತು ಬಳಗದರಿಂದ ನೃತ್ಯ ಸಂಗಮ, ಮಂಗಳೂರು ಶ್ರೀ ಲಲಿತೆ ತಂಡದವರಿಂದ ಶನಿ ಮಹಾತ್ಮೆ ನಾಟಕ ಪ್ರದರ್ಶನಗೊಂಡಿತು.

Ads on article

Advertise in articles 1

advertising articles 2

Advertise under the article