
ನಿಗೂಢ ನಾಪತ್ತೆಯಾಗಿದ್ಷ ದಿಗಂತ್ ಪತ್ತೆ
Saturday, March 8, 2025
ಲೋಕಬಂಧು ನ್ಯೂಸ್
ವಿದ್ಯಾರ್ಥಿ ದಿಗಂತ್ ಸುಮಾರು 10 ದಿನದ ಬಳಿಕ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಆತನನ್ನು ಬಂಟ್ವಾಳಕ್ಕೆ ಕರೆ ತಂದರು.
ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, 40ಕ್ಕೂ ಅಧಿಕ ಪೋಲೀಸರ ತಂಡ ಹುಡುಕಾಟ ನಡೆಸಿತ್ತು. ಡಿಎಆರ್ ತಂಡದ 30 ಪೋಲೀಸರು, ರೈಲ್ವೆ ಪೋಲೀಸ್, ಅಗ್ನಿಶಾಮಕ ದಳ. ಡ್ರೋಣ್ ಕ್ಯಾಮೆರಾಗಳೊಂದಿಗೆ ಹುಡುಕಾಟ ನಡೆಸಿದ್ದರು.
ಆತ ಫೆ.25ರ ಸಂಜೆಯಿಂದ ನಾಪತ್ತೆಯಾಗಿದ್ದ.ಫರಂಗಿಪೇಟೆ ಆಂಜನೇಯ ವ್ಯಾಯಾಮ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ದಿಗಂತ್, ದೇವಸ್ಥಾನಕ್ಕೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದ. ಬಳಿಕ ಫರಂಗಿಪೇಟೆಯಲ್ಲಿ ರೈಲ್ವೆ ಹಳಿಯಲ್ಲಿ ದಿಗಂತ್ ಚಪ್ಪಲಿ ಹಾಗೂ ಮೊಬೈಲ್ ಪತ್ತೆಯಾಗಿತ್ತು. ಒಂದು ಚಪ್ಪಲಿಯಲ್ಲಿ ರಕ್ತದ ಕಲೆ ಕಂಡುಬಂದಿತ್ತು.