ಲೋಕಬಂಧು ನ್ಯೂಸ್
ಕಾಪು: ಇಲ್ಲಿನ ಹೊಸಮಾರಿಗುಡಿ ದೇವಳದಲ್ಲಿ ಭಕ್ತರಿಂದ ಬರೆಯಲ್ಪಟ್ಟು ಕ್ಷೇತ್ರಕ್ಕೆ ಸಮರ್ಪಿಸಿದ್ದ ನವದುರ್ಗಾ ಲೇಖನವನ್ನು ದೇವಿ ಸನ್ನಿಧಾನದಲ್ಲಿ ವಾಗೀಶ್ವರಿ ಪೂಜೆ ಮೂಲಕ ಸಮರ್ಪಿಸಲಾಯಿತು.
ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ನವದುರ್ಗಾ ಲೇಖನ ಸಮಿತಿ ಅಧ್ಯಕ್ಷ ಮಾಜಿ ಶಾಸಕ ರಘುಪತಿ ಭಟ್ ಮೊದಲಾದವರಿದ್ದರು.