-->
ಪಾಡಿಗಾರು ಲಕ್ಷ್ಮೀನರಸಿಂಹ ಉಪಾಧ್ಯ ನಿಧನ

ಪಾಡಿಗಾರು ಲಕ್ಷ್ಮೀನರಸಿಂಹ ಉಪಾಧ್ಯ ನಿಧನ

ಲೋಕಬಂಧು ನ್ಯೂಸ್
ಉಡುಪಿ: ಇಲ್ಲಿನ ಪಾಡಿಗಾರು ಲಕ್ಷ್ಮೀನರಸಿಂಹ ಉಪಾಧ್ಯ (75) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು.ಉಡುಪಿ ವಿದ್ಯಾದಾಯಿನಿ ಯಕ್ಷಗಾನ ಮಂಡಳಿಯಲ್ಲಿ ಸ್ತ್ರೀ ವೇಷಧಾರಿಯಾಗಿ ಕಲಾ ಸೇವೆಗೈದಿದ್ದರು. ಖ್ಯಾತ ಕಲಾವಿದ ಪಡ್ರೆ ಚಂದು ಅವರ ಶಿಷ್ಯರಾಗಿದ್ದ ಅವರು ಮಲ್ಪೆ ಶಂಕರನಾರಾಯಣ ಸಾಮಗ ಮತ್ತು ಕೋಳ್ಯೂರು ರಾಮಚಂದ್ರ ರಾಯರೊಂದಿಗೆ ಸಹವೇಷಧಾರಿಯಾಗಿ ಪಾತ್ರ ನಿರ್ವಹಿಸಿದ್ದರು.


ಕುತ್ಯಾಳ ಮೇಳದ ಪ್ರಧಾನ ಸ್ತ್ರೀ ವೇಷಧಾರಿಯಾಗಿ ಬಳಿಕ ವಿವಿಧ ಮೇಳಗಳಲ್ಲಿ, ಹವ್ಯಾಸಿ ಸಂಘಗಳಲ್ಲಿ ಅತಿಥಿ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದರು.


ಕೆಮ್ತೂರು ದೊಡ್ಡಣ್ಣ ಶೆಟ್ಟಿ ನಾಟಕ ಮಂಡಳಿಯಲ್ಲಿ ಸ್ತ್ರೀ ವೇಷಧಾರಿಯಾಗಿ ಪಾತ್ರ ನಿರ್ವಹಿಸಿದ್ದರು.


ಉಡುಪಿ ಗೀತಾಂಜಲಿ ಥಿಯೇಟರ್‌ನಲ್ಲಿ ಸಹಾಯಕ ಪ್ರಬಂಧಕರಾಗಿ ಕಾರ್ಯನಿರ್ವಹಿಸಿದ್ದ ಅವರು, ವೈದಿಕರ ಸಹಾಯಕರಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.


ಮೃತರು ಪತ್ನಿ ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.


ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದ ಅವರ ನಿಧನಕ್ಕೆ ಸಂಸ್ಥೆ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.

Ads on article

Advertise in articles 1

advertising articles 2

Advertise under the article