.jpg)
ಮೇ 14ರಂದು ನುಡಿನಮನ
Tuesday, May 13, 2025
ಲೋಕಬಂಧು ನ್ಯೂಸ್
ಉಡುಪಿ: ಇತ್ತೀಚೆಗೆ ನಿಧನರಾದ ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ, ಸಾಮಾಜಿಕ ಸಂಘಟಕ, ಉಡುಪಿ ಪರ್ಯಾಯೋತ್ಸವ ಸಹಿತ ಉಡುಪಿಯ ವಿವಿಧ ಸಾಂಸ್ಕೃತಿಕ ಧಾರ್ಮಿಕ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಪ್ರೊ. ಹೆರಂಜೆ ಕೃಷ್ಣ ಭಟ್ ಅವರಿಗೆ ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಆಶ್ರಯದಲ್ಲಿ ಮೇ 14ರಂದು ಸಂಜೆ 5 ಗಂಟೆಗೆ ರಾಜಾಂಗಣದಲ್ಲಿ ನುಡಿನಮನ ಪೂರ್ವಕ ಸಂಸ್ಮರಣೆ ಕಾರ್ಯಕ್ರಮ ನಡೆಯಲಿದೆ.
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿ, ಸಂತಾಪ ಸಂದೇಶ ನೀಡುವರು.
ಶಾಸಕ ಯಶಪಾಲ್ ಸುವರ್ಣ, ವಿದ್ವಾಂಸರಾದ ಡಾ.ಪಾದೆಕಲ್ಲು ವಿಷ್ಣು ಭಟ್, ಪ್ರೊ. ಎಂ.ಎಲ್. ಸಾಮಗ, ಡಾ. ಎಂ.ಪ್ರಭಾಕರ ಜೋಷಿ, ಡಾ.ಕೆ.ಪಿ. ರಾವ್ ಹಾಗೂ ರಾಘವ ನಂಬಿಯಾರ್ ಭಾಗವಹಿಸಿ ನುಡಿನಮನ ಸಲ್ಲಿಸುವರು ಎಂದು ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.