ಪೆರ್ಣಂಕಿಲದಲ್ಲಿ ಚಪ್ಪರ ಮುಹೂರ್ತ
Monday, March 31, 2025
ಲೋಕಬಂಧು ನ್ಯೂಸ್
ಉಡುಪಿ: ಪೇಜಾವರ ಮಠ ನೇತೃತ್ವದಲ್ಲಿ ಏಪ್ರಿಲ್ 9ರಿಂದ 13ರ ವರೆಗೆ ಶ್ರೀಕ್ಷೇತ್ರ ಪೆರ್ಣಂಕಿಲದಲ್ಲಿ ನಡೆಯುವ ಭಕ್ತಿಸಿದ್ಧಾಂತೋತ್ಸವ, ರಾಮೋತ್ಸವ ಮತ್ತು ಶ್ರೀಮನ್ಯಾಯಸುಧಾಮಂಗಳೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ಸೋಮವಾರ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಚಪ್ಪರ ಮುಹೂರ್ತ ನೆರವೇರಿತು.ಮಹೋತ್ಸವ ಸಮಿತಿ ಅಧ್ಯಕ್ಷ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್, ಪೇಜಾವರ ಮಠದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ಪ್ರಧಾನ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ, ಕೋಶಾಧಿಕಾರಿ ಪೆರ್ಣಂಕಿಲ ಶ್ರೀಶ ನಾಯಕ್, ಸಗ್ರಿ ಅನಂತ ಸಾಮಗ, ಸಗ್ರಿ ಆನಂದತೀರ್ಥ ಉಪಾಧ್ಯಾಯ, ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಕೆ. ವಿಷ್ಣುಮೂರ್ತಿ ಆಚಾರ್ಯ, ಕಾರ್ಯಕ್ರಮ ಸಂಘಟಕ ಪೆರಂಪಳ್ಳಿ ವಾಸುದೇವ ಭಟ್, ಭಜನಾ ಮಂಡಳಿ ಅಧ್ಯಕ್ಷ ರಮೇಶ್ ನಾಯಕ್, ಸ್ಥಳೀಯರಾದ ಸುರೇಶ್ ತಂತ್ರಿ, ಸದಾನಂದ ಪ್ರಭು, ಉಮೇಶ್ ನಾಯಕ್, ಸಂದೀಪ್ ನಾಯಕ್ ಹೆಬ್ಬಾಗಿಲು, ರಮಾನಂದ ನಾಯಕ್, ಗುತ್ತಿಗೆದಾರ ಕೃಷ್ಣ ಕುಲಾಲ್, ಸತೀಶ್ ನಾಯಕ್ ಮೊದಲಾದವರಿದ್ದರು.