-->
ಸಬ್ ರಿಜಿಸ್ಟರ್ ಕಚೇರಿ ಕೆಲಸದಲ್ಲಿ ಬದಲಾವಣೆ

ಸಬ್ ರಿಜಿಸ್ಟರ್ ಕಚೇರಿ ಕೆಲಸದಲ್ಲಿ ಬದಲಾವಣೆ

ಲೋಕಬಂಧು ನ್ಯೂಸ್, ಬೆಂಗಳೂರು
ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕದಲ್ಲಿ ಜಿಲ್ಲೆಗೆ ಒಂದು ಉಪನೋಂದಣಾಧಿಕಾರಿ ಕಚೇರಿ 2 ಮತ್ತು 4ನೇ ಶನಿವಾರ ಹಾಗೂ ಎಲ್ಲಾ ಭಾನುವಾರಗಳಂದು ಕಾರ್ಯನಿರ್ವಹಿಸಲು ಸರ್ಕಾರ ಆದೇಶ ಹೊರಡಿಸಿದೆ.ರಜಾ ದಿನ ಕಾರ್ಯನಿರ್ವಹಿಸುವ ಉಪನೋಂದಣಾಧಿಕಾರಿ ಕಚೇರಿಗೆ ಮಂಗಳವಾರ ರಜಾ ದಿನ ಎಂದು ಘೋಷಿಸಿ ಆದೇಶಿಸಲಾಗಿದೆ.


ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿಗಳು 2025ರ ಜೂನ್ 1ರಿಂದ ಡಿಸೆಂಬರ್ 28ರ ವರೆಗೆ ಪ್ರತೀ 2ನೇ ಮತ್ತು 4ನೇ ಶನಿವಾರ ಹಾಗೂ ಭಾನುವಾರಗಳಂದು ಕಾರ್ಯನಿರ್ವಹಿಸಲಿವೆ.

Ads on article

Advertise in articles 1

advertising articles 2

Advertise under the article